LatestLife Style | ಜೀವನಶೈಲಿಬೆಂಗಳೂರು-Bengaluruರಾಜ್ಯ-Karnataka

ಬೇಸಿಗೆ ಬಿಸಿಲಿಗೆ ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್‌- ಹೆಚ್ಚಿದ ತರಕಾರಿ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲ (Summer) ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗದ ಹಿನ್ನೆಲೆ ಬೆಲೆಗಳು ಭಾರಿ ದುಬಾರಿಯಾಗಿದ್ದು, ಸಿಲಿಕಾನ್ ಸಿಟಿ (Silicon City) ಮಂದಿಗೆ ಶಾಕ್ ಎದುರಾಗಿದೆ.

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಚಿಲ್ಲರೆ ವ್ಯಾಪರಿಗಳು ತರಕಾರಿಗಳನ್ನು (Vegetables) ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲಿ ಬೆಲೆ ಹೆಚ್ಚಾಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರಿಗಳು ತಂದ ತರಕಾರಿ ಒಣಗಿ ಹೋಗುತ್ತೀವೆ. ಇದನ್ನೂ ಓದಿ: ಶ್ರೀನಿವಾಸ ಪ್ರಸಾದ್ ಅವರ ಅಂತ್ಯಕ್ರಿಯೆ ಮಂಗಳವಾರ

https://youtu.be/BNwwXuWwJxU?si=E8Lv09ztEPDDger2

ಸದ್ಯಕ್ಕೆ ಮಳೆ ಬಂದರು ಹೊಸ ಫಸಲು ಬರಲು 2 ತಿಂಗಳ ಕಾಲವಾಶವಾದರು ಬೇಕು. ಈ ಪರಿಸ್ಥಿತಿಯಲ್ಲಿ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಯಾವ ಯಾವ ತರಕಾರಿ ಬೆಲೆ ಎಷ್ಟಿದೆ?

  • ಹುರುಳಿಕಾಯಿ ಕೆಜಿಗೆ 200 ರೂ ತಲುಪಿದೆ,
    * ಕ್ಯಾರೆಟ್ 100,
    * ಟಮೋಟೋ 30,
    * ಕ್ಯಾಪ್ಸಿಕಂ 80 ರೂ,
    * ಆಲೂಗೆಡ್ಡೆ 40,
    * ಬದನೆಕಾಯಿ 50 ರೂ,
    * ಗೆಡ್ಡೆಕೋಸ್ 50,
    * ಸೌತೆಕಾಯಿ 50 ರೂ,
    * ಬಾಟಲ್ ಬದನೆ 60 ರೂ,
    * ಸೌತೆಕಾಯಿ 48 ರೂ,
    * ನುಗ್ಗೆಕಾಯಿ 44 ರೂ,
    * ಬೆಳ್ಳುಳ್ಳಿ 294 ರೂ,
    * ಹಾಗಲಕಾಯಿ 59 ರೂ,
    * ಬೆಂಡೆಕಾಯಿ 60 ರೂ.

ಮಳೆಯ ಕೊರತೆ, ಬಿಸಿಲಿನ ತಾಪ, ಬರ ಮತ್ತು ಬಿತ್ತನೆ ಕಡಿಮೆಯಾದ ಪರಿಣಾಮ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಳುವರಿ ಕುಂಠಿತ ಪರಿಣಾಮ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ. ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿರುವ ರಾಜ್ಯದ ಜನರು

https://youtu.be/hUI_GuBNXgY?si=H76T_vo2kuUJff1g
Share with Friends
author avatar
News Desk