Latestಚುನಾವಣೆ-Electionರಾಜ್ಯ-Karnatakaಹಾಸನ-Hassan

ಹಲವಾರು ದೇಗುಲಗಳಲ್ಲಿ ಪೂಜೆ ಮಾಡಿದ ಬಳಿಕ ಮತ ಚಲಾಯಿಸಿ ಮಾಜಿ ಪ್ರಧಾನಿ ಹೆಚ್‌ಡಿಡಿ

ಹಾಸನ: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯು ಇಂದು ಭರದಿಂದ ಸಾಗುತ್ತಿದೆ. ಅಂತೆಯೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD. Devegowda) ಕೂಡ ತಮ್ಮ ಪತ್ನಿಯ (Wife) ಜೊತೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.

ಹೊಳೆನರಸೀಪುರ (Holenarsipura) ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 251 ರಲ್ಲಿ ದಂಪತಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: ಗಂಟೆಗೂ ಹೆಚ್ಚು ಕಾಲ ನಿಂತು ಮತ ಚಲಾಯಿಸಿದ ಗೋಲ್ಡನ್ ಕ್ವೀನ್ ದಂಪತಿ

https://youtu.be/DbyxeBZAkXM?si=d1lZlTTX6wfO4_3c

ಅವರು ತಮ್ಮ ಮತ ಚಲಾಯಿಸಿವ ಮುನ್ನ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಹರದನಹಳ್ಳಿಯ ದೇವೇಶ್ವರ ದೇವಾಲಯ ಹಾಗೂ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ದೇವೇಗೌಡರು ಪೂಜೆ ಸಲ್ಲಿಸಿದರು. ಮತದಾನಕ್ಕೆ ಆಗಮಿಸಿದ ವೇಳೆ ಕೂಡ ಪಡುವಲಹಿಪ್ಪೆ ಗ್ರಾಮದ ಕೋದಂಡರಾಮ ದೇವಾಲಯದಲ್ಲೂ ಅವರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಒಟ್ಟಾಗಿ ಬಂದು ಮತದಾನ ಮಾಡಿದ ದೊಡ್ಮನೆ ಮಂದಿ

https://youtu.be/FoIoyjlVOkA?si=q7CLouguLycIEmNr

ಬೆಳಗ್ಗೆ 9 ಗಂಟೆಯವರೆಗೆ ಹಾಸನದಲ್ಲಿ 8.23% ಮತದಾನ ನಡೆದಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಅಖಾಡದಲ್ಲಿದ್ದಾರೆ. ಇದನ್ನೂ ಓದಿ: ನಿಮ್ಮ ಹಕ್ಕನ್ನು ಚಲಾಯಿಸಿ: ವೋಟ್ ಮಾಡಿದ ಬಳಿಕ ಮನವಿ ಮಾಡಿದ ಗೋಲ್ಡನ್ ಸ್ಟಾರ್

Share with Friends
author avatar
News Desk