Latestಬೀದರ್​-Bidarಬೆಂಗಳೂರು-Bengaluruರಾಜ್ಯ-Karnatakaಶಿವಮೊಗ್ಗ-Shivamogga

ರಾಜ್ಯದಲ್ಲಿ ವರುಣಾರ್ಭಟ: ಮಳೆ ಅಬ್ಬರಕ್ಕೆ ಶಿವಮೊಗ್ಗ, ಬೀದರ್‌ನಲ್ಲಿ ಇಬ್ಬರು ಬಲಿ

ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆ (Rain) ಶುರುವಾಗಿದೆ. ಮಳೆ ಪರಿಣಾಮ ಜನರ ಜೀವನ ಅಸ್ತವ್ಯಸ್ತ ಆಗಿದೆ. ಮಳೆಯ ಅಬ್ಬರಕ್ಕೆ ಬೀದರ್ (Bidar) ಮತ್ತು ಶಿವಮೊಗ್ಗದಲ್ಲಿ (Shivamogga) ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಇನ್ನು ರಾಜ್ಯದಲ್ಲಿ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿತಕ್ಕೆ ರಾಕೇಶ್ ಎಂಬ ಯುವಕ ಬಲಿಯಾಗಿದ್ದಾನೆ. ತೋಟದಲ್ಲಿ ಕೆಲಸ ಮುಗಿಸಿಕೊಂಡು ರಾಕೇಶ್ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ:  ದರ್ಶನ್ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕುರಿತು ಸುಮಲತಾ ಸ್ಪಷ್ಟತೆ

https://youtu.be/Dm7ueJm9lRw?si=4O_8tiCuKYk_PN7r

ದಕ್ಷಿಣ ಕನ್ನಡ ಜೆಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಮಂಗಳೂರು ನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ. ಇಂದು ಸಹ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ:  ಬಾತ್ ರೂಮ್‌ನಲ್ಲಿದ್ದ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯುರಿಟಿ ಗಾರ್ಡ್- ಕಂಬಕ್ಕೆ ಕಟ್ಟಿ ಥಳಿಸಿದ ಜನರು

Share with Friends
author avatar
News Desk