Crime NewsLatestಬೆಂಗಳೂರು-Bengaluruರಾಜ್ಯ-Karnataka

ರಾಮೇಶ್ವರಂ ಕೆಫೆ ಬಾಂಬ್‌ಬ್ಲಾಸ್ಟ ಪ್ರಕರಣ – ಎನ್‌ಐಡಿ ಕಸ್ಟಡಿಗೆ ಶಂಕಿತರನ್ನ ಒಪ್ಪಿಸಿದ ಕೋರ್ಟ್

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ಬ್ಲಾಸ್ಟ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ಎನ್‌ಐಎ ಕಸ್ಟಡಿಗೆ ನೀಡಿದೆ.

ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಬೆನ್ನಲೇ ನ್ಯಾಯಾಧೀಶರ ಮನೆಗೆ ಬಿಗಿ ಪೊಲೀಶ್ ಭದ್ರತೆ ಒದಗಿಸಲಾಗಿತ್ತು. ಎನ್‌ಐಎ ಪರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್ ಹಾಜರಾಗಿದ್ದು, ವಾದ ಮಂಡಿಸಿದ್ದರು. ಈ ವೇಳೆ ಎನ್‌ಐಎ ಎಸ್ಪಿ ಶಿವವಿಕ್ರಮ್ ಕೂಡ ಹಾಜರಿದ್ದರು.ಇದನ್ನೂ ಓದಿ: ಜೈಲಿನ ಅನುಭವದ ಬಗ್ಗೆ ಹೇಳಿಕೊಂಡ ಸೋನು ಶ್ರೀನಿವಾಸ ಗೌಡ

https://youtu.be/MUDGOl7ETaI?si=Tm6j2SgIZvB34XYC


ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿತ್ತು. ಬಳಿಕ ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‍ನನ್ನು ಎನ್‍ಐಎ ಪೊಲೀಸರು ಕರೆತಂದಿದ್ದರು. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.ಇದನ್ನೂ ಓದಿ:  ಫ್ಲೈ ಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

https://youtu.be/-Sk1lSZYsqM?si=-3q3fb1KYgVbZyOU


ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು. ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯರ‍್ಯಾರ ಪಾತ್ರ ಏನಿತ್ತು? ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ? ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು? ಬೇರೆ ಎಲ್ಲೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬ ಅಂಶಗಳು ಸೇರಿದಂತೆ ನಾನಾ ದೃಷ್ಟಿಕೋನದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ:  ಕುಡಿದ ಮತ್ತಿನಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ : ಇಬ್ಬರು ಬಿಜೆಪಿ ಕಾರ್ಯಕರ್ತರು ಸಾವು

Share with Friends
author avatar
News Desk