EntertainmentLatest

ಜೈಲಿನ ಅನುಭವದ ಬಗ್ಗೆ ಹೇಳಿಕೊಂಡ ಸೋನು ಶ್ರೀನಿವಾಸ ಗೌಡ

ಒಂದಲ್ಲ ಒಂದು ವಿಷಯಕ್ಕೆ ಸೋನು ಸುದ್ದಿಯಾಗುತಲೇ ಇರುತ್ತಾರೆ. ಟಿಕ್‌ಟಾಕ್ ಹಾಗೂ ರೀಲ್ಸ್ ಮೂಲಕ ಫೇಮಸ್ ಆಗಿದ್ದ ಸೋನು ಇತ್ತಿಚೆಗೆ ಮಗು ದತ್ತು ಪಡೆದ ವಿಚಾರಕ್ಕೆ ಅವರು ಜೈಲು ಸೇರಿದ್ದರು. ಇದೀಗ ಅವರು ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದರು. ನಂತರ ನ್ಯಾಯಂಗ ಬಂಧನಕ್ಕೆ ನೀಡಿದರು. 23 ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅನ್ನೋದು ಬೇಸರದ ವಿಚಾರ. ಆದರೆ ಜೀವನದಲ್ಲಿ ಕೆಟ್ಟಿದ್ದಿರಲ್ಲಿ ಒಳ್ಳೆಯದಿರಲಿ ಜೀವನದಲ್ಲಿ ಎಲ್ಲವನ್ನು ಅನುಭಿಸಬೇಕು. ಅ ಬಗ್ಗೆ ನನಗೆ ಖುಷಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಸಿಂಗಂ 2 ವಿಲನ್ ಅರುಳ್ ಮಣಿ ಹೃದಯಾಘಾತದಿಂದ ನಿಧನ

ಜೈಲಿನಲ್ಲಿ ತುಂಬಾನೇ ಸೊಳ್ಳೆ. ನಾಲ್ಕು ಗೋಡೆ, ಅಲ್ಲಿನ ಜನ ನೋಡಿ ನನಗೆ ಇದೆಲ್ಲ ಬೇಕಿತ್ತಾ ಎಂದು ಅನಿಸಿತ್ತು. ಬೇರೆ ಬೇರೆ ಪ್ರಕರನ ಮಾಡಿದವರು ಅಲ್ಲಿ ಇದ್ದರು. ಮೂರು ದಿನಕ್ಕೆ ಒಮ್ಮ ಫೋನ್ ಕೊಡ್ತಾರೆ. ಬಳಿಕ ಫೋನ್‌ನಲ್ಲಿ ಮಾತನಾಡಲು ಕೇವಲ 3-4 ನಿಮಿಷಗಳಷ್ಟೇ. ಅದನ್ನ ಮಾತನಾಡಲು ಸಹ ಮೂರು ದಿನ ಕಾಯಬೆಕು. ಇದರಿಂದ ವ್ಯಕ್ತಿಯ ಬೆಲೆ ಗೊತ್ತಾಗುತ್ತದೆ. ನಾಲ್ಕು ಗೋಡೆ ಮಧ್ಯೆ ಇದ್ದು ಎಲ್ಲವು ಕಲಿತೆ ಎಂದು ತಮ್ಮ ಅನುಭವವನ್ನು ಸೋನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಬ್ಬದ ದಿನವೇ ಸಿಹಿಸುದ್ದಿ- ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ್

ಟ್ರೋಲ್ ಪೇಜ್‌ಗಳು ನನ್ನನ್ನು ಸಪೋರ್ಟ್ ಮಾಡಿದ್ದಾರೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ನನಗೆ ಇದು ಖುಷಿ ನೀಡಿದೆ. ಎಲ್ಲರು ನನ್ನ ಜೊತೆ ನಿಂತರು ನನ್ನ ಪ್ರಕರಣದ ಬಗ್ಗೆ ಹೆಚ್ಚಿನದ್ದನ್ನು ಹೇಳೋಕೆ ಆಗುವುದಿಲ್ಲ ಎಂದಿದ್ದಾರೆ ಸೋನು. ಇದನ್ನೂ ಓದಿ: RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್!

Share with Friends
author avatar
News Desk