
ಮನೋರಾಯನ ಪಾಳ್ಯದಲ್ಲಿ ಹೆಚ್ಚಿದ ಕೇಬಲ್ ಕಳ್ಳತನ..!
ಬೆಂಗಳೂರು.ಅ.5- ಹೆಬ್ಬಾಳದ ಮನೋರಾಯನ ಪಾಳ್ಯದಲ್ಲಿ ಬೋರ್‌ವೆಲ್‌ಗಳ ಕೇಬಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಅಪ್ರಾಪ್ತ ಬಾಲಕರೇ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನಗಳಲ್ಲಿ ಬಂದು ಬೋರ್‌ವೆಲ್‌ಗಳಿಗೆ ಅಳವಡಿಸಿರುವ ಕೇಬಲ್‌ಗಳನ್ನು ಕತ್ತರಿಸಿ ಕಳ್ಳತನ ಮಾಡುತ್ತಿದ್ದ ಬಾಲಕರು, ಕೇಬಲ್‌ಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು.
ಇತ್ತೀಚೆಗೆ ಕೇಬಲ್ ಕಳ್ಳತನಕ್ಕೆ ಮುಂದಾಗಿದ್ದ ಬಾಲಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮನೋರಾಯನ ಪಾಳ್ಯದಲ್ಲಿ ಪದೇಪದೇ ಬೋರ್‌ವೆಲ್ ಕೇಬಲ್‌ಗಳು ಕಳ್ಳತನವಾಗುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಕಳ್ಳತನ ತಡೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
