
ಕಾರು ಡಿಕ್ಕಿ: ದಂಪತಿ ಸಾ*
ದೊಡ್ಡಬಳ್ಳಾಪುರ.ಸೆ.30- ದ್ವಿಚಕ್ರ ವಾಹನಕ್ಕೆ ಕಾರೊಂದು ಹಿಂಬದಿಯಿAದ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೂಗೇನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತರನ್ನು ಕತ್ತಿಹೊಸಗಳ್ಳಿ ಮೂಲದ ಲಕ್ಷ್ಮಯ್ಯ (55) ಹಾಗೂ ಅವರ ಪತ್ನಿ ಅನಿತಾ (45) ಎಂದು ಗುರುತಿಸಲಾಗಿದೆ.
ಪಿತೃಪಕ್ಷದ ಅಂಗವಾಗಿ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸಂಬAಧಿಕರ ಮನೆಗೆ ತೆರಳಿದ್ದ ದಂಪತಿ, ಬಳಿಕ ಸಂಬAಧಿಕರೊAದಿಗೆ ಹರಿಕಥೆಗೆ ತೆರಳಿದ್ದರು.ಹರಿಕಥೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ, ಕೂಗೇನಹಳ್ಳಿ ಗೇಟ್ ಬಳಿ ಹಿಂಬದಿಯಿAದ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಮೃತಪಟ್ಟಿದ್ದಾರೆ.
ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
