
ತಾಯಿ ನೆನಪಿಗಾಗಿ ಅಂಬಾ ಭವಾನಿ ಮಂದಿರ ನಿರ್ಮಿಸಿದ ಮಾಜಿ ಶಾಸಕ
ಕಲಬುರಗಿ.ಸೆ.24- ತಾಯಿಯ ನೆನಪಿಗಾಗಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅಂಬಾ ಭವಾನಿ ಮಂದಿರವನ್ನು ನಿರ್ಮಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ನೂತನ ಅಂಬಾ ಭವಾನಿ ಮಂದಿರವನ್ನು ನಿರ್ಮಿಸಲಾಗಿದ್ದು, ಮಂದಿರದ ಕಾರ್ಯಕ್ರಮದಲ್ಲಿ ಪಂಚ ಪೀಠದ ಮಠಾಧೀಶರು ಭಾಗವಹಿಸಿದ್ದರು.
ನನಗೆ ತಾಯಿ ಇಲ್ಲ.ಅವರ ನೆನಪಿಗಾಗಿ ಈ ಮಂದಿರವನ್ನು ನಿರ್ಮಿಸಿದ್ದೇನೆ ಎಂದು ಸುಭಾಷ್ ಗುತ್ತೇದಾರ್ ತಿಳಿಸಿದ್ದಾರೆ.
ಹೆತ್ತ ತಾಯಿಯ ಸ್ಮರಣಾರ್ಥವಾಗಿ ನಿರ್ಮಿಸಿರುವ ಈ ಮಂದಿರದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ತಡಕಲ್ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಅಂಬಾ ಭವಾನಿ ಮಂದಿರ ಸ್ಥಳೀಯರ ಗಮನ ಸೆಳೆದಿದೆ.
