
ಮಳೆಯಿಂದ ವ್ಯಾಪಾರ ನಷ್ಟವಾದರೂ ಖುಷಿ ವ್ಯಕ್ತಪಡಿಸಿದ ವ್ಯಾಪಾರಿ!
ಬೆಳಗಾವಿ.ಸೆ.24- ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಮಳೆಯ ನೀರಿಗೆ ತರಕಾರಿಗಳು ಕೊಚ್ಚಿಕೊಂಡು ಹೋಗಿದ್ದು, ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ.
ಪರಸ್ಥಳಗಳಿಂದ ತರಕಾರಿ ತಂದು ಮಾರಾಟಕ್ಕೆ ಬಂದಿದ್ದ ವ್ಯಾಪಾರಿಗಳ ತರಕಾರಿಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಆದರೂ, ವ್ಯಾಪಾರ ನಷ್ಟವಾದರೂ ಮಳೆ ಬಂದಿರುವುದಕ್ಕೆ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಹಾಗೂ ಜನರಲ್ಲಿ ಆತಂಕ ಮೂಡಿತ್ತು. ಇದೀಗ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿರುವುದು ರೈತರಿಗೆ ಕೊಂಚ ನೆಮ್ಮದಿ ತಂದಿದೆ.
ಚಿಕ್ಕೋಡಿ ಉಪವಿಭಾಗದ ವಿವಿಧೆಡೆ ಮಳೆಯಾಗಿದ್ದು, ಮಳೆಗಾಗಿ ಕಾಯುತ್ತಿದ್ದ ರೈತರು ಸಂತಸ ವ್ಯಕ್ತಪಡಿಸಿದ್ದು,ರೈತರಿಗೆ ಸಂತಸ, ನಮಗೂ ಸಂತಸ ಎಂದು ವ್ಯಾಪಾರಿ ಶಬ್ಬಿರ ಮಹ್ಮದ್ ಹೇಳಿದ್ದಾರೆ.
