
ಯಾದಗಿರಿಯ ಗುರುಸಣಗಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ – ಹಲ್ಲೆ, ಜಾತಿ ನಿಂದನೆ ಆರೋಪ
ಯಾದಗಿರಿ,ಸೆ 15 : ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಬಂದಿದ್ದ ವೇಳೆ ಮಾತಿನ ಚಕಾಮಕಿ ನಡೆದು ಆಟೋ ಚಾಲಕನಿಗೆ ತಿಳಿ ಹೇಳಿದಕಾರಣ ಮಾತಿಗೆ ಮಾತು ಬೆಳೆದು ಆರಂಭವಾದ ಜಗಳ ತಾರಕಕ್ಕೇರಿದೆ ಹಲ್ಲೆಗೊಳಗಾದ ತಾಯಪ್ಪ ಎಂಬಾತ ಆಟೋ ನಿಲ್ಲಿಸಿದ್ದ ರಸ್ತೆಯಲ್ಲಿ ಅಡ್ಡ ಬಂದಿದ್ದ,ಆಗ “ಮಗುವನ್ನು ನೋಡಿಕೊಂಡು ವಾಹನ ಚಲಾಯಿಸಿ” ಎಂದು ಹೇಳಿದಕ್ಕೆ ಈ ಘಟನೆ ನಡಿದೆ.
ಆಟೋ ಸರಿಯಾಗಿ ಚಾಲನೆ ಮಾಡಿ ಎಂದು ಬುದ್ಧಿಮಾತು ಹೇಳಿದ್ದೇ ತಪ್ಪಾಯ್ತಾ ದೇವಸ್ಥಾನಕ್ಕೆ ಬಂದ ಕುಟುಂಬದವರು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ ಭಾರೀ ಗಲಾಟೆ ನಡೆದಿದ್ದು ದೊಣ್ಣೆ ಹಿಡಿದು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ ಈ ಕುರಿತ ಒಂದುಮಾತಿನ ಚಕಮಕಿ ನಡೆದ ಬಳಿಕ ಮೂವರು ಸೇರಿಕೊಂಡು ಆತನಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಮತ್ತೊಂದು ಗುಂಪಿನವರು ಸ್ಥಳಕ್ಕೆ ಬಂದು ಜಗಳ ಬಿಡಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆದಿದೆ . ದೊಣ್ಣೆ, ಕಲ್ಲು ಹಾಗೂ ಬಡಿಗೆಯಿಂದ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಹಲವರಿಗೆ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ವಡಗೇರಾ ಪೊಲೀಸರು 13 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಣ್ಣ ವಿಚಾರಕ್ಕೆ ಆರಂಭವಾದ ಮಾತಿನ ತಕರಾರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
