
ಗಣೇಶ ಚತುರ್ಥಿ ಹಬ್ಬದ ಆಚರಣೆ – ಗದಗ ನಗರದಲ್ಲಿ ಜೋರು
ಗದಗ:ಗಣೇಶ ಚತುರ್ಥಿ ಹಬ್ಬದ ಆಚರಣೆ ಗದಗ ನಗರದಲ್ಲಿ ಜೋರು ಆಗಿದೆ.ಲಂಭೋಧರನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಭಕ್ತರು.
ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಒಂದೇ ಸೂರಿನಡಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟ ನಡೆಯುತ್ತಿದ್ದು, ಭಕ್ತರ ದಂಡೇ ಹರಿದು ಬರುತ್ತಿದೆ.
ತಂಡೋಪ ತಂಡವಾಗಿ ಆಗಮಿಸಿ ವಿಘ್ನೇಶ್ವರನನ್ನು ಒಯ್ಯುತ್ತಿರುವ ಭಕ್ತರು.ಬೆಳಿಗ್ಗೆಯಿಂದಲೇ ಗಣೇಶ ಆಯ್ಕೆ ಮಾಡಿಕೊಂಡು ಒಯ್ಯುತ್ತಿರುವ ಭಕ್ತರು.ಆಟೋ, ಕಾರು, ದ್ವಿಚಕ್ರ ವಾಹನದಲ್ಲಿ ಗಣೇಶನನ್ನು ಸಾಗಿಸುತ್ತಿರುವ ಸಾರ್ವಜನಿಕರು. ಡಿಜೆ ಸದ್ದು, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಜನರು.
ಸಾಕಷ್ಟು ಸದ್ದು, ಗದ್ದಲದೊಂದಿಗೆ ವಿನಾಯಕನನ್ನ ಮನೆಗೆ ಬರಮಾಡಿಕೊಳ್ತಿರೋ ಜನ. ನಗರದ ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆಯ ಸಂಭ್ರಮ ಮನೆ ಮಾಡಿದೆ.ಗಣೇಶ ಹಬ್ಬದ ಹಿನ್ನಲೆಯಲ್ಲಿ ವಿವೇಕಾನಂದ ಸಭಾಭವನದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಸಂಚಾರ ನಿಯಂತ್ರಣದಲ್ಲಿ ತೊಡಗಿದ್ದಾರೆ.
