LatestTop Storiesಜಿಲ್ಲಾ ಸುದ್ದಿಗಳು | District News

ಧಾರವಾಡ ‌ಜಿಲ್ಲೆಯಲ್ಲಿ ಸರ್ಕಾರಿ ಶಾಲಾ‌ಮಕ್ಕಳಿಗೆ ಕಳಪೆ ಶೂ ವಿತರಣೆ ಆರೋಪ

ಹುಬ್ಬಳ್ಳಿ : ಪ್ರಸಕ್ತ ವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ನೀಡಿದ ಶೂ ಹಾಗೂ ಸಾಕ್ಸ್ ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪ‌ ಕೇಳಿ ಬಂದಿದೆ.

ಒಂದು ವಾರದಲ್ಲೇ ಶೂಗಳು ಕಿತ್ತು ಹೋಗಿದ್ದು, ಎಸ್ ಡಿ ಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ರಾಜ್ಯ ಸರ್ಕಾರ ಗುಣಮಟ್ಟದ ಶೂ ವಿತರಣೆಗೆ ಪಟ್ಟು ಹಿಡಿದಿವೆ.ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯಮಟ್ಟದ ಏಜೆನ್ಸಿ ಮೂಲಕ ಶೂ ಮತ್ತು ಸಾಕ್ಸ್ ವಿತರಣೆ ಮಾಡಲಾಗಿದೆ.

ಕಳೆದ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ಶೂಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು ಸ್ಥಳೀಯ ಮಟ್ಟದ ವ್ಯಾಪಾರಿಗಳಿಂದ ಖರೀದಿಸುತ್ತಿದ್ದರು. ಜೊತೆಗೆ ವ್ಯಾಪಾರಿಗಳಿಗೆ ವೃತ್ತಿಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಮತ್ತು ಜಿಎಸ್​ಟಿ ಇರಲೇಬೇಕು ಅನ್ನೋ ನಿಯಮವಿತ್ತು.

ಅದರೊಂದಿಗೆ ಸ್ಥಳೀಯ ಮಟ್ಟದಲ್ಲಿಯೇ ವ್ಯಕ್ತಿ ನಿತ್ಯವೂ ಕಣ್ಣೆದುರಿಗೆ ಕಾಣುವ ಕಾರಣ ಅವರು ಉತ್ತಮ ಗುಣಮಟ್ಟದ ಶೂಗಳನ್ನು ನೀಡಬೇಕಿತ್ತು. ಆದರೆ ಈ ಬಾರಿ ರಾಜ್ಯಮಟ್ಟದಲ್ಲಿಯೇ ಇವುಗಳ ಖರೀದಿಯಾಗಿದ್ದರಿಂದ ಶೂಗಳ ಮೇಲೆ ಕಂಪನಿ ಹೆಸರಿಲ್ಲ. ಹೀಗಾಗಿ ಈ ಶೂಗಳು ಅತ್ಯಂತ ಕಳಪೆ ಗುಣಮಟ್ಟದಾಗಿವೆ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರುಗಳು ಆರೋಪಿಸಿದ್ದಾರೆ.

ಅಣ್ಣಿಗೇರಿ ಸರ್ಕಾರಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ವೀರೇಶ ಕುಬಸದ ಸಂಪೂರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿ,ಎಸ್ ಡಿಎಂಸಿ ಆರಂಭವಾದಾಗಿನಿಂದಲೂ ಶಾಲಾ ಮಟ್ಟದಲ್ಲಿ ಶೂ ಖರೀದಿ ಸಮಿತಿ ರಚನೆ ಮಾಡಲಾಗುತ್ತಿತ್ತು.

ಆ ಸಮಿತಿ ಮೂಲಕ ಉತ್ತಮ ಗುಣ್ಣಮಟ್ಟದ ಕಂಪನಿ ಶೂ ಖರೀದಿ‌ ಮಾಡಲಾಗುತ್ತಿತ್ತು. ಸರ್ಕಾರದ ಆದೇಶದಂತೆ ಶೂ ಖರೀದಿ ಮಾಡಿ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿತ್ತು. ಆದ್ರೆ ಈ ವರ್ಷ ಎಸ್ ಡಿ ಎಂಸಿ ಸದಸ್ಯರುಗಳ ಗಮನಕ್ಕೆ ತರದೆ ಸರ್ಕಾರ ಏಜೆನ್ಸಿ ಮೂಲಕ ಶೂ ಖರೀದಿ ಮಾಡಿದೆ.

ಧಾರವಾಡ ಜಿಲ್ಲೆಯ 848 ಶಾಲೆಗಳಲ್ಲಿ ವಿತರಣೆ ಮಾಡಲಾಗಿದೆ‌.‌ ಒಂದು ವಾರದಲ್ಲೇ ಹರಿದು ಹೋಗಿವೆ. ಶಿಕ್ಷಣ ಸಚಿವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಏಜೆನ್ಸಿಯನ್ನು ರದ್ದುಪಡಿಸಿ ಉತ್ತಮ ಗುಣಮಟ್ಟದ ಶೂಗಳನ್ನು ಇದೇ ವರ್ಷವೇ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

Share with Friends
author avatar
Digital Desk