
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ SC -ST ಆಯೋಗದ ಅಧ್ಯಕ್ಷ ಡಾಕ್ಟರ್ ಎಲ್ ಮೂರ್ತಿ ಭೇಟಿ
ತುಮಕೂರು : ಕುಣಿಗಲ್ ತಾಲೂಕಿನ ಹೆಗ್ಗಡತಿಹಳ್ಳಿ ಗ್ರಾಮದ ಶಿಳ್ಳೆ ಖ್ಯಾತ ಜನಾಂಗದ ಜಮೀನಿಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಡಾ, ಎಲ್ ಮೂರ್ತಿ ಭೇಟಿ ನೀಡಿದ್ದಾರೆ.
ಚಿಕ್ಕಮಗಳೂರು ಪ್ರವಾಸ ಕೈಗೊಂಡು ಎಸ್ಸಿ/ ಎಸ್ಟಿ ಸಮುದಾಯದ ಭೂ ವಿವಾದಗಳು ಮತ್ತು ದೌರ್ಜನ್ಯ ಪ್ರಕರಣಗಳ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾರೆ.ದಲಿತ ಸಮುದಾಯಕ್ಕೆ ಮಂಜೂರಾದ ಜಮೀನುಗಳು ಕಾನೂನು ಬಹಿರವಾಗಿ ಬೇರೆಯವರ ಪಾಲಾಗುತ್ತಿರುವುದನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೆಗ್ಗಡತಿಹಳ್ಳಿ ಗ್ರಾಮದ ಶಿಳ್ಳೆಖ್ಯಾತ ಜನಾಂಗದವರು ನನ್ನ ಬಳಿ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು,ಅದರಂತೆ ನಾನು ಖುದ್ದಾಗಿ ನಾನೇ ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ! ಉಪಮುಖ್ಯಮಂತ್ರಿಗಳ ಹಾಗೂ ಜಿಲ್ಲಾಧಿಕಾರಿಗಳ ಸಭೆ ಇರುವುದರಿಂದ ಸ್ಥಳಕ್ಕೆ ತಹಸಿಲ್ದಾರ್ ಅವರು ಬಂದಿಲ್ಲ..
ಕಾನೂನು ರೀತಿಯಲ್ಲಿ ಇವರಿಗೆ ಆದೇಶ ಆಗಿದೆ ಅದರಂತೆ ಜಿಲ್ಲಾಡಳಿತ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.ನಂತರ ಹೆಗ್ಗಡತಿಹಳ್ಳಿ ಭೂ ವಿವಾದಗಳ ಸಂಪೂರ್ಣ ವರದಿಯನ್ನು ಶುಕ್ರವಾರ ನನಗೆ ಸಂಪೂರ್ಣ ವರದಿ ನೀಡಬೇಕು.
ಪ್ರತಿಯೊಂದು ದಾಖಲಾತಿಗಳು ತೆಗೆದುಕೊಂಡು ನನ್ನ ಕಚೇರಿಗೆ ಬರಬೇಕು ಎಂದು ಆರ್ ಐ, ವಿಎ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ,ಎಲ್ಲಾ ದಾಖಲಾತಿಗಳೊಂದಿಗೆ ನನ್ನ ಕಚೇರಿಗೆ ತಪ್ಪದೆ ಬರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.ನ್ಯಾಯಾಲಯದ ಆದೇಶದ ಹಿನ್ನೆಲೆ ದಲಿತರಿಗೆ ಮಂಜೂರಾದ ಜಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
