
ಆಸ್ಪತ್ರೆ ಸುತ್ತಲೂ ಹುಲ್ಲು ಬೆಳೆದು ಹಾಳಾಗುತ್ತಿಯಿರುವ ಹೈಟೆಕ್ ಕಟ್ಟಡ..!
ಯಾದಗಿರಿ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿರುವ ಹೈಟೆಕ್ ಆಸ್ಪತ್ರೆ ಈಗ ಪುಂಡ ಪೋಕರಿಗಳ ವಾಸಸ್ಥಾನವಾಗಿದೆ.ಗುರ್ಮಿಟಿಕಲ್ ಕ್ಷೇತ್ರದ ವ್ಯಾಪ್ತಿಗೆ ಬರುವ ಆಸ್ಪತ್ರೆ ಸ್ಥಿತಿ ಹಾಳಾಗಿದೆ.ಹಾಗು ಆಸ್ಪತ್ರೆ ಸುತ್ತಲು ಹುಲ್ಲು ಬೆಳೆದು ಹಾಳಾಗುತ್ತಿದೆ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.
ನಂತರ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಆಸ್ಪತ್ರೆ ಈಗ ಈ ಉದ್ಘಾಟನೆ ಇಲ್ಲದೆ ನಿರ್ಲಕ್ಷ್ಯ ವಾಗಿದೆ.ಮತ್ತು ಅನುದಾನದ ಕೊರತೆಇಂಡಗೈ ಕಾಮಗಾರಿ ಕಟ್ಟಡ ಅರ್ಧಕ್ಕೆ ನಿಂತಿದೆ.
ಕಲಬುರಗಿ ಟು ಯಾದಗಿರಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಈ ಆಸ್ಪತ್ರೆ ಈಗ ಪುಂಡ ಪೋಕರಿಗಳ ವಾಸಸ್ಥಾನವಾಗಿದ್ದು. ಈ ಬಗ್ಗೆ ಸ್ಥಳೀಯ ಶಾಸಕ ಶರಣಗೌಡ ಕಂದಕೂರುಗಮನಹರಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಆಯುಷ್ಮಾನ್ ಕೇಂದ್ರದ ಸುತ್ತಲೂ ಹುಲ್ಲು ಬೆಳೆದು ಹೈಟೆಕ್ ಕಟ್ಟಡ ಹಾಳಾಗಿದ್ದು,ಈ ಆಸ್ಪತ್ರೆ ಮೂರುವರೆ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಯುಷ್ಮಾನ್ ಕೇಂದ್ರ ವಾಗಿದೆ.
ಮತ್ತು ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಯಾವುಕ್ಕಿ ಹೆಚ್ಚಿನ ಅನುದಾನ ದೊರಕಿಲ್ಲ.ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆಯು ಕೂಡ ಸಿಗುತ್ತಿಲ್ಲ.
ಹಾಗೂ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರು ಅಲ್ಲಿ ಕೊಠಡಿಗಳ ಸಮಸ್ಯೆಗಳು ಹೆಚ್ಚಾಗಿದೆ.ಹೀಗಾಗಿ ಕೂಡಲೇ ಹೊಸ ಕಟ್ಟಡ ಉದ್ಘಾಟನೆ ಮಾಡುವಂತೆ ಜನರು ಆಗ್ರಹ ಮಾಡಿದ್ದಾರೆ,.
ಈ ಕುರಿತು ಸ್ಥಳೀಯ ಶಾಸಕ ಶರಣಗೌಡ ಕಂದಕೂರು ಈ ಬಗ್ಗೆ ಗಮನ ಹರಿಸಬೇಕು ಹಾಗು ಒಂದು ವೇಳೆ ಸುಖಸುಮ್ಮನೆ ವಿಳಂಬ ನೀತಿ ಮುಂದುವರೆದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು.
