EntertainmentLatestಸ್ಯಾಂಡಲ್​ವುಡ್-Sandalwood

ಪುತ್ರ ಸಾಮ್ರಾಟ್ ವಿರುದ್ಧ ಹಲ್ಲೆ ಆರೋಪ : ಪ್ರತಿಕ್ರಿಯೆ ನೀಡಿದ ನಟ ದುನಿಯಾ ವಿಜಯ್

ಬೆಂಗಳೂರು : ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿರುದ್ಧ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮ್ರಾಟ್‌ಗೆ ಜಾಮೀನು ಕೂಡ ದೊರೆತಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಇದೇ ಮೊದಲ ಬಾರಿಗೆ ನಟ ದುನಿಯಾ ವಿಜಯ್ ತಮ್ಮ ಪುತ್ರನ ವಿರುದ್ಧದ ಆರೋಪದ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.

“ಮಗನೇ ಆದ್ರೂ ತಪ್ಪು ಮಾಡಿದ್ರೆ ತಪ್ಪು ತಪ್ಪೇ. ಕಾನೂನು ಅದನ್ನು ನೋಡಿಕೊಳ್ಳುತ್ತದೆ. ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ. ಮಗನ ಜೊತೆ ಮಾತನಾಡಿದ್ದೇನೆ, ಬುದ್ಧಿ ಹೇಳಿದ್ದೇನೆ. ಮಕ್ಕಳು ಅಂದಾಗ ಜಗಳ ಇರುತ್ತೆ, ಅದು ಎಲ್ಲರ ಲೈಫ್‌ನಲ್ಲೂ ಇದ್ದೇ ಇರುತ್ತೆ. ನಾನೂ ಕೂಡ ನನ್ನ ಮಗನಿಗೆ ಬುದ್ಧಿ ಹೇಳಿದ್ದೇನೆ” ಎಂದು ದುನಿಯಾ ವಿಜಯ್ ಹೇಳಿದ್ದಾರೆ.

“ಫ್ಯಾಮಿಲಿ ವಿಚಾರಗಳನ್ನು ಮತ್ತೆ ಮತ್ತೆ ಎಲ್ಲ ಕಡೆಯಲ್ಲೂ ಮಾತನಾಡಲ್ಲ. ಮಾತನಾಡೋಕೂ ಇಷ್ಟಪಡಲ್ಲ” ಎಂದು ದುನಿಯಾ ವಿಜಯ್ ಸ್ಪಷ್ಟಪಡಿಸಿದ್ದಾರೆ.

Share with Friends
author avatar
Digital Desk