EntertainmentLatestTop Storiesಬೆಂಗಳೂರು-Bengaluruಸ್ಯಾಂಡಲ್​ವುಡ್-Sandalwood

ಎರಡುದಿನಗಳಲ್ಲೇ 190 ಕೋಟಿ ರೂಪಾಯಿಗೂ ಬಾಚಿಕೊಂಡ ಟಾಕ್ಸಿಕ್..

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ಈ ಮೂಲಕ ಕೇವಲ ಎರಡು ದಿನಗಳಲ್ಲೇ , 190 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ವಿಶೇಷವಾಗಿ ಉತ್ತರ ಭಾರತದ ಹಿಂದಿ ಬೆಲ್ಟ್ ನಲ್ಲಿ ಸಿನಿಮಾ ಸೃಷ್ಟಿಸಿರುವ ಸಂಚಲನ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.

ವಿಶ್ವದಾದ್ಯಂತ ಮೊದಲ ದಿನ 140.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಭಾರತದಲ್ಲಿ ಮಾತ್ರ 101.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು.ಹಾಗೂ ಕೇವಲ ಎರಡು ದಿನಗಳಲ್ಲೇ , 190 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಪಡೆದುಕೊಂಡಿದೆ.

ಎರಡುದಿನಗಳಲ್ಲೇ 190 ಕೋಟಿ ರೂಪಾಯಿಗೂ ಬಾಚಿಕೊಂಡ ಟಾಕ್ಸಿಕ್

ಎರಡನೇ ದಿನ ದೇಶೀಯ ಮಾರುಕಟ್ಟೆಯಲ್ಲಿ ಸಿನಿಮಾ 36.40 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ,ಗುರುವಾರ ವಾರದ ದಿನವಾಗಿದ್ದರೂ ಟಾಕ್ಸಿಕ್ ಹವಾ ಕಡಿಮೆಯಾಗಿಲ್ಲ.ಭಾರತದಲ್ಲಿ ಎರಡು ದಿನದ ಒಟ್ಟು ನೆಟ್ ಕಲೆಕ್ಷನ್ 137.50 ಕೋಟಿ ರೂಪಾಯಿಗೆ ಬಾಚಿಕೊಂಡಿದೆ.

ಇದೀಗ ವೀಕೆಂಡ್ ಸಮೀಪಿಸುತ್ತಿದ್ದಂತೆ ಟಾಕ್ಸಿಕ್ ಟಿಕೆಟ್ ಗೆ ಭಾರಿ ಬೇಡಿಕೆ ಶುರುವಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಸೇರಿದಂತೆ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಬಹುತೇಕ ಶೋಗಳು ಹೌಸ್ ಫುಲ್ ಆಗುತ್ತಿವೆ. ಅದರಂತೆ, ಈ ವೀಕೆಂಡ್ ನಲ್ಲಿ ಸಿನಿಮಾ 300 ಕೋಟಿ ಕ್ಲಬ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

Share with Friends
author avatar
Digital Desk