
ಬಾದಾಮಿಯಲ್ಲಿ ಹೊಸ ಅಭಿವೃದ್ಧಿ ಪರ್ವ.!
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸನ್ಮಾನ್ಯ ಶ್ರೀ ಭೀಮಸೇನ್ ಚಿಮ್ಮನಕಟ್ಟಿ ಅವರು ಇಂದು ಐತಿಹಾಸಿಕ ಸ್ಥಳವಾದ ಬಾದಾಮಿಗೆ ಹೈಟೆಕ್ ಬಸ್ ನಿಲ್ದಾಣದ ಅಡಿಗಲ್ಲು ಸಮಾರಂಭ ನೆರವೇರಿಸಿದರು.
ಈ ಒಂದು ಐತಿಹಾಸಿಕ ನಗರಕ್ಕೆ ಬಾದಾಮಿ ಜನರ ಕನಸು ನನಸು ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ.ಬಡವರು ದೀನದಲಿತರ ಕನಸು ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಪ್ರತಿ ಹಳ್ಳಿಗೂ ಬಸ್ ವ್ಯವಸ್ಥೆ ಮಾಡಿರುವ ಶಾಸಕರು .
ಈಗಾಗಲೇ ಬಾದಾಮಿ ತಾಲೂಕಿನಲ್ಲಿ ಶಾಸಕರು ವಿದ್ಯಾಭ್ಯಾಸದ ಕಡೆಗೆ ಮಕ್ಕಳು ಹೆಚ್ಚು ಗಮನಹರಿಸಲೆಂದು ವಸತಿ ಶಾಲೆ , ಮತ್ತು ಪ್ರೌಢಶಾಲೆ , ಪಬ್ಲಿಕ್ ಶಾಲೆ ಹೀಗೆ ಶಾಲಾ ಕಾಲೇಜುಗಳಿಗೆ ಓದುವ ಮಕ್ಕಳಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದು.
ಈಗಾಗಲೇ ಶಾಸಕರು ಮತಕ್ಷೇತ್ರದ ತುಂಬಾ ಗ್ರಾಮಗಳಿಗೆ ಭೇಟಿ ನೀಡಿ ಶಾಲಾ ಹೊಸ ಕಟ್ಟಡಗಳ ಹಾಗೂ ರಸ್ತೆ ಚರಂಡಿ ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಪ್ರತಿನಿತ್ಯ ಕ್ಷೇತ್ರದಲ್ಲಿ ಸಂಚರಿಸಿ ಈ ಎಲ್ಲಾ ಕಾರ್ಯಕ್ರಮಗಳು ಚಾಲನೆ ನೀಡಿದ್ದು.
ಈ ಒಂದು ಐತಿಹಾಸಿಕ ಸ್ಥಳವಾದ ಬಾದಾಮಿ ಚಾಲುಕ್ಯರ ನಾಡೆಂದು ಪ್ರಸಿದ್ಧಿ ಪಡೆದಂತಹ ಸ್ಥಳದಲ್ಲಿ ಹೈಟೆಕ್ ಬಸ್ ನಿಲ್ದಾಣ 16 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಾಗೂ 3.50 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸುವಂತಹ ಗ್ರಂಥಾಲಯ ಅದು ಕೂಡ ಅಡಿಗಲ್ಲು ಕಾರ್ಯಕ್ರಮವನ್ನು ಶಾಸಕರು ನೆರವೇರಿಸಿದರು.
ಮಕ್ಕಳಿಗೆ ಸರ್ಕಾರಿ ಕಾಲೇಜು ಬಸ್ ನಿಲ್ದಾಣದ ಅಡಿಗಲ್ಲು ಸಮಾರಂಭಕ್ಕೆ ಬಾದಾಮಿಯ ಸುತ್ತಮುತ್ತಲಿನ ಹಾಗೂ ನಗರದಲ್ಲಿನ ಜನಸಾಗರವೇ ಹರಿದು ಬಂದಿದ್ದು, ಶಾಸಕರು ಆಡುವ ಮಾತಿನ ನುಡಿಗಳನ್ನು ಕಂಡು , ಜನ ಬೆರಗಾದರು ಅವರ ಭಾಷಣದ ಉದ್ದಕ್ಕೂ ಬಡವರು ಹಾಗೂ ದೀನದಲಿತರ ಹಾಗೂ ಬಡ ಮಕ್ಕಳ ವಿದ್ಯಾ ಅಭ್ಯಾಸಕ್ಕೆ ಅನುಕೂಲಕ್ಕಾಗಿ ನಾನು ಈ ಕ್ಷೇತ್ರಕ್ಕೆ ದುಡಿಯಲು ಸದಾ ಸಿದ್ಧ ಎಂದು ಶಾಸಕರ ನುಡಿದಿದ್ದರೆ.
ಸನ್ಮಾನ್ಯ ಶ್ರೀ ಭೀಮಸೇನ್ ಚಿಮ್ಮನಕಟ್ಟಿ ಅವರು ನನ್ನ ಕ್ಷೇತ್ರಕ್ಕೆ ಮುಖ್ಯಮತ್ರಿಗಳಿಂದ ಹಿಡಿದು ಸಚಿವರು ಕೂಡ ನನ್ನ ಕ್ಷೇತ್ರದ ಸಮಸ್ಯೆಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅದರಲ್ಲೂ ವಿಶೇಷ ಸನ್ಮಾನ್ಯ ಶ್ರೀಸತೀಶ್ ಜಾರಕಿಹೊಳಿ ಸಚಿವರು ಹಾಗೂ ಬೈರತಿ ಸುರೇಶ್ ಸಚಿವರು ಮತ್ತು ಯತೀಂದ್ರ ಸಚಿವರು ಹೀಗೆ ಹಲವಾರು ಸಚಿವರ ಸಹಕಾರವನ್ನು ವ್ಯಕ್ತಪಡಿಸಿದರು.
ಅದೇ ರೀತಿಯಾಗಿ ನನ್ನ ಬಾದಾಮಿಯ ಮತಕ್ಷೇತ್ರದ ಮತದಾರರು ಹಾಗೂ ಅಭಿಮಾನಿಗಳು ಕಾರ್ಯಕರ್ತರು ಹಾಗೂ ನನ್ನ ಕ್ಷೇತ್ರದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ನನಗೆ ಸಹಕಾರ ನೀಡುತ್ತಿರುವ ಇವರೆಲ್ಲರಿಗೂ ಧನ್ಯವಾದಗಳು ಎಂದು ಅಭಿಮಾನದಿಂದ ಹೇಳಿದರು.
ಅದರಲ್ಲಿ ವಿಶೇಷ ಸಾರಿಗೆ ಸಂಸ್ಥೆಯ ಎಲ್ಲಾ ಸಿಬ್ಬಂದಿಯವರಿಗೂ ಅವರ ಕಷ್ಟಗಳನ್ನು ತಿಳಿದು ಹಳ್ಳಿಗೆ ವಸತಿ ಬರುವ ಕಂಡಕ್ಟರ್ ಹಾಗೂ ಡ್ರೈವರ್ ಇವರಿಗೆ ನಿಮ್ಮ ಗ್ರಾಮದಲ್ಲಿ ಸಹಕಾರ ನೀಡಿ ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.ಕೊನೆಯದಾಗಿ ಶಾಸಕರ ಮಾತು ನನ್ನ ಮತ ಕ್ಷೇತ್ರದ ಮತದಾರರು ಇಡೀ ನನ್ನ ಕುಟುಂಬವೇ ತಲೆ ಮೇಲೆ ಹೊತ್ತು ತಿರುಗಿದ್ದಾರೆ.
