
ಮೂರಜಿ ದೇಸಾಯಿ ವಸತಿ ಶಾಲೆಯಲ್ಲಿಅನುಮಾನಾಸ್ಪದ ಸಾವು ..!
ಚಿಕ್ಕೋಡಿ: ರಾಯಬಾಗ ತಾಲೂಕಿನ ಸುತಟ್ಟಿ ಗ್ರಾಮದ ಮೂರಜಿ ದೇಸಾಯಿ ವಸತಿ ಶಾಲೆಯಲ್ಲಿ 15 ವರ್ಷದ ಬಾಲಕನೊಬ್ಬ
ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕೋಡಿಯ ರಾಯಬಾಗ ತಾಲೂಕಿನ ಸುತಟ್ಟಿ ಗ್ರಾಮದ ಮೂರಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಈಗ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಇದ್ದಕ್ಕಿದ್ದಹಾಗೆ 15 ವರ್ಷದ ಬಾಲಕನೊಬ್ಬ ಹೇಗೆ ಸಾವನ್ನಪಿದ ? ಎಂದು ಕುಟುಂಬಸ್ಥರಲ್ಲಿ ಹಾಗು ಪೊಲೀಸರಲ್ಲಿ ಪ್ರಶ್ನೆಯಾಗಿ ಕಾಡುತ್ತಿದೆ.
ಮೂರಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಈ ಘಟನೆಯೊಂದು ಪ್ರಶ್ನೆಯಾಗಿ ಉಳಿಯಿದೆ.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಹಾಗು ಸಂಭಂದಿಕರ ಆಕ್ರಂದನ ಮುಗಿಲುಮುಟ್ಟಿದೆ ,ಮತ್ತು ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗೌತಮ್ ಮೃತ ದೇಹ ಕಂಡು ಮುಗಿಲು ಮುಟ್ಟಿದ ಆಕ್ರಂದನ ಕುಟುಂಬಸ್ಥರಿಗೂ ತಿಳಿಸದೆ ಆಸ್ಪತ್ರೆಗೆ ದಾಖಲಿಸಿದ ಸಿಬ್ಬಂದಿ ನೇಣು ಹಾಕಿಕೊಂಡಿದ್ದಾನೆಂದು ಪೋಷಕರಿಗೆ ಸಳ್ಳು ಮಾಹಿತಿ.
ಗೌತಮ್ ಮೈಮೇಲೆ ಬಾಸುಂಡೆ ಕಂಡು ಕೊಲೆ ಎಂಬ ಶಂಕೆಹಾಸ್ಟೆಲ್ ವಾರ್ಡನ್ ಹಲ್ಲೆಯಿಂದಾಗಿ ಸಾವನಪ್ಪಿರೋ ಶಂಕೆ..?ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ಬಳಿ ಕುಟುಂಬಸ್ಥರ ಆಕ್ರೋಶಹಾಸ್ಟೆಲ್ ವಾರ್ಡನ್ ವಿರುದ್ಧ ಗೌತಮ್ ಕುಟುಂಬಸ್ಥರ ಆಕ್ರೋಶ.
ಬಾಲಕನ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿನ ಹಿಂದಿರುವ ಕಾರಣ ತನಿಖೆಯಿಂದ ಹೊರಬರಬೇಕಿದೆ.
ಪೊಲೀಸರು ಈ ವಿಷಯದ ಕುರಿತು ಕಠಿಣಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಕ್ರಂದನ ವ್ಯಕ್ತಪಡಿಸಿದ್ದಾರೆ.
