LatestTop Storiesತುಮಕೂರು-Tumakuru

ನಾಗವಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆಯಾಗಿದ್ದಾನೆ..?

ತುಮಕೂರು: ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ನಾಗವಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆಯಾಗಿದ್ದಾನೆ.

ನಾಗವಲ್ಲಿ ಕೆರೆಯಲ್ಲಿ ವ್ಯಕ್ತಿ ನೀರಿನಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಈಶ್ವರ್ ಮಲ್ಪೆ ಮತ್ತು ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.

ನೀರಿನಲ್ಲಿ ತಕ್ಷಣ ಈಶ್ವರ್ ಮಲ್ಪೆ ಮತ್ತು ತಂಡ ಹಾಗೂ ಅಗ್ನಿಶಾಮಕ ದಳ ಸತತವಾಗಿ ಐದು ಗಂಟೆಗಳ ಕಾಲ ಕೆರೆಯಲ್ಲಿ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ. ಐದು ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಪ್ರತಿಕೂಲ ಪರಿಸ್ಥಿತಿಯ ನಡುವೆ ಹುಡುಕಾಟ ಕಾರ್ಯಾಚರಣೆ ಮುಂದುವರಿದಿದೆ.* ಕೆರೆಯಲ್ಲಿ ನೀರು ಹೆಚ್ಚಿರುವುದು ಮತ್ತು ಹೂಳು ತುಂಬಿರುವುದು ಶೋಧ ಕಾರ್ಯಕ್ಕೆ ಅಡಚಣೆಯಾಗಿದೆ.

ಈಶ್ವರ್ ಮಲ್ಪೆ ಅವರು ಸರ್ಕಾರದ ಅಧಿಕೃತ ಸಿಬ್ಬಂದಿಯಲ್ಲದೆ, ಸ್ವಯಂ ಸೇವೆಯಾಗಿ ನದಿ, ಸಮುದ್ರ ಹಾಗೂ ಕೆರೆಗಳಲ್ಲಿ ಆಪತ್ತುಗೀಡಾದವರ ಶೋಧ ನಡೆಸುತ್ತಾರೆ. ಈ ಹಿಂದೆಯೂ ಹಲವು ಕಾರ್ಯಾಚರಣೆಗಳಲ್ಲಿ ಅವರು ಮೃತದೇಹಗಳನ್ನು ಪತ್ತೆಹಚ್ಚಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ನಾಪತ್ತೆಯಾಗಿರುವ ವ್ಯಕ್ತಿ ಶೀಘ್ರವಾಗಿ ಪತ್ತೆಯಾಗಲಿ ಎಂದು ಸಾರ್ವಜನಿಕರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Share with Friends
author avatar
Digital Desk