Health | ಆರೋಗ್ಯLatestTop Stories

ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ – ಆರೋಗ್ಯ ಸಚಿವ ಯು.ಟಿ. ಖಾದರ್

ಬೆಂಗಳೂರು : ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಹಾಗು ಅಂತರ್‌ರಾಜ್ಯ ಮಟ್ಟದ ಜಾಲದ ಕುರಿತು ತನಿಖೆ ನಡೆಸವುದಾಗಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ರವರು ತಿಳಿಸಿದ್ದಾರೆ.

ನಕಲಿ ಔಷಧಿ ಪ್ರಕರಣದ ತನಿಖೆಗೆ ಶೀಘ್ರದಲ್ಲೇ ಎಸ್‌ಐಟಿ ರಚಿಸಲಿದ್ದು, ರಾಮನಗರ ಪೊಲೀಸರು ಈಗಾಗಲೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಸದ್ಯ ಆರು ಕಂಪನಿಗಳನ್ನು ಗುರುತಿಸಲಾಗಿದ್ದು, ನಕಲಿ ಔಷಧಿಗಳನ್ನು ತಂದು ಮಾರಾಟ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಾಲದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಕಲಿ ಔಷಧಿಗಳು ಯಾವ ಆಸ್ಪತ್ರೆಗಳಿಗೆ ತಲುಪಿವೆ..? ಎಷ್ಟು ರೋಗಿಗಳಿಗೆ ನೀಡಲಾಗಿದೆ ಮತ್ತು ಎಷ್ಟು ವರ್ಷಗಳಿಂದ ಈ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬುದು ತನಿಖೆಯ ಬಳಿಕ ಬಹಿರಂಗವಾಗಲಿದೆ.

ಅಲ್ಲದೆ, ನಕಲಿ ಔಷಧಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಇಲಾಖೆಗೆ ತಿಳಿಸುವಂತೆ ಸಚಿವರು ಮನವಿ ಮಾಡಿದ್ದಾರೆ.TOPನಕಲಿ ಔಷಧಿ ಜಾಲದ ವಿರುದ್ಧ ಎಸ್‌ಐಟಿ ತನಿಖೆ ರಾಜ್ಯದಾದ್ಯಂತ ನಕಲಿ ಔಷಧಿ ಜಾಲ ಪತ್ತೆಗೆ ಕ್ರಮ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿಕೆನೀಡಿದ್ದಾರೆ.ಜಾಲದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಜಾರಿಗೊಳಿಸಲಾಗಿದೆ ..ರಾಮನಗರ ಪೊಲೀಸರ ಕಾರ್ಯಕ್ಕೆ ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

Share with Friends
author avatar
Digital Desk