LatestTop Storiesತುಮಕೂರು-Tumakuru

ಮಾಜಿ ಸಚಿವ ಬಿ .ಸಿ ನಾಗೇಶ್ ನಿಧನ..!

ತುಮಕೂರು : ಮಾಜಿ ಸಚಿವ ಬಿ.ಸಿ ನಾಗೇಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು .ಕಳೆದ ೧ ವರ್ಷದಿಂದ ಟ್ಯೂಮರ್‌ನಿಂದ ಬಳಲುತ್ತಿದ್ದರು . ಹಾಗು ಎರಡು ಬಾರಿ ಶಸ್ತ್ರಚಿಕಿತ್ಸೆಮಾಡಿಸಲಾಗಿತ್ತು ಎನ್ನಲಾಗಿದೆ.ಮಂಗಳವಾರದಂದು ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯನಿವಾಸದಲ್ಲಿ ಸಾವನ್ನಪ್ಪಿದ್ದಾರೆ

ಆರಂಭಿಕ ಜೀವನ ಮತ್ತು ಶಿಕ್ಷಣ: ನಾಗೇಶ್ ರವರು ಹುಟ್ಟಿದ್ದು ತುಮಕೂರು ಜಿಲ್ಲೆಯಲ್ಲಿ ಅವರು ಬಿ ಎಂ ಶ್ರೀನೀವಾಸಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿಇಂಜಿನಿಯರಿಂಗ್ ಪದವಿಯನ್ನು ಪಡೆದರು. ಹಾಗೂ ಅವರ ವಿದ್ಯಾರ್ಥಿ ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನ ಭಾಗವಾಗಿದ್ದರು. ಬಿ . ಸಿ ನಾಗೇಶ್ ರವರ ತಂದೆ ಮತ್ತು ಬಿ ಸಿ ಸಾವಿತ್ರಮ್ಮ.

ರಾಜಕೀಯ ವೃತ್ತಿ : ಅವರು ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರಾರಂಭಿಸಿದ್ದು ನಂತರ ಹಲವಾರು ವರ್ಷಗಳಿಂದ ಸಂಘದ ಪೂರ್ಣ ಸಮಯದ ಕಾರ್ಯಕರ್ತರಾಗಿದ್ದಾರೆ.ಅವರು ೧೯೮೪ ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.ನಾಗೇಶ್ ಅವರು ೨೦೦೮ ಮತ್ತು ೨೦೧೮ ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದ ಗೆದ್ದಿದ್ದರು.

ಬೆಳ್ಳೂರು ಚಂದ್ರಶೇಖರಯ್ಯ ನಾಗೇಶ್ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ೦೪ ಆಗಸ್ಟ್ ೨೦೨೧ ರಿಂದ ಕರ್ನಾಟಕದ ಪ್ರಸ್ತುತ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಸಕಾಲ ಸಚಿವರಾಗಿದ್ದಾರೆ. ಅವರು ತಿಪಟೂರಿನಿಂದ ಎರಡು ಬಾರಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಇವರು ತಮ್ಮ ವೃತ್ತಿ ಜೀವನದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ .

ಮಾಜಿ ಸಚಿವ ಬಿ.ಸಿ ನಾಗೇಶ್ ಅವರಿಗೆ 67 ವರ್ಷ ವಯಸ್ಸಾಗಿತ್ತು.ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು .ಕಳೆದ ೧ ವರ್ಷದಿಂದ ಟ್ಯೂಮರ್‌ನಿಂದ ಬಳಲುತ್ತಿದ್ದರು . ಹಾಗು ಎರಡು ಬಾರಿ ಶಸ್ತ್ರಚಿಕಿತ್ಸೆಮಾಡಿಸಲಾಗಿತ್ತು ಎನ್ನಲಾಗಿದೆ. ಮಂಗಳವಾರದಂದು ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೆಲ ರಾಜಕಾರಣಿಗಳು ಇವರ ಅಂತಿಮ ದರ್ಶನವನ್ನು ಪಡೆದು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಗಲಿಕೆ ಎಲ್ಲರ ಮನದಲ್ಲಿ ಸುದ್ದಿ ಮಾಡಿದೆ.

Share with Friends
author avatar
Digital Desk