Latestಬೆಂಗಳೂರು-Bengaluru

HMT ವಾಚ್ ಖರೀದಿಗೆ 2 ಕಿಲೋಮೀಟರ್ ಕ್ಯೂ

ಬೆಂಗಳೂರು, ಆ.15: ದೇಶದ ಹೆಮ್ಮೆಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ HMT ವಾಚ್‌ಗಳ ಮೇಲಿನ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ ಎಂಬುದಕ್ಕೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ಕಂಡುಬಂದ ದೃಶ್ಯವೇ ಸಾಕ್ಷಿಯಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ HMT ಸಂಸ್ಥೆ ಬಿಡುಗಡೆ ಮಾಡಿರುವ ‘Independence Day Special Edition’ ಕೈಗಡಿಯಾರಗಳನ್ನು ಖರೀದಿಸಲು ಸಾವಿರಾರು ಮಂದಿ ಜಾಲಹಳ್ಳಿಯ HMT ಔಟ್‌ಲೆಟ್‌ಗೆ ಮುಗಿಬಿದ್ದಿದ್ದಾರೆ.

ಮುಂಜಾನೆಯಿಂದಲೇ ಔಟ್‌ಲೆಟ್‌ ಎದುರು ಜನಸಾಗರವೇ ಸೇರಿದ್ದು, ವಿಶೇಷ ಸರಣಿಯ ವಾಚ್‌ಗಳನ್ನು ಖರೀದಿಸಲು ಸುಮಾರು 2 ಕಿಲೋಮೀಟರ್ ಉದ್ದದ ಸರತಿ ಸಾಲು ನಿರ್ಮಾಣವಾಗಿದೆ.

ಯುವಕರು, ಹಿರಿಯರು ಹಾಗೂ ವಾಚ್ ಸಂಗ್ರಹಕಾರರು ಸೇರಿದಂತೆ ಹಲವರು ಗಂಟೆಗಟ್ಟಲೆ ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ HMT ವಾಚ್ ಖರೀದಿಸಲು ಕಾಯುತ್ತಿದ್ದಾರೆ.

‘ಭಾರತದ ಕಾಲಪಾಲಕ’ ಎಂದೇ ಖ್ಯಾತಿ ಪಡೆದಿರುವ HMT ಮೇಲಿನ ಜನರ ಅಭಿಮಾನ ಹಾಗೂ ಬ್ರ್ಯಾಂಡ್‌ನ ಗತವೈಭವ ಇಂದಿಗೂ ಜೀವಂತವಾಗಿದೆ ಎಂಬುದನ್ನು ಜಾಲಹಳ್ಳಿಯಲ್ಲಿನ ಈ ದೃಶ್ಯ ಮತ್ತೊಮ್ಮೆ ಸಾಬೀತುಪಡಿಸಿದೆ.

Share with Friends
author avatar
News Desk