LatestTop Storiesಬೆಂಗಳೂರು-Bengaluru

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದರೆ ಯುವಕರಿಗೆ ಸ್ಪೂರ್ತಿ: ಮಾಜಿ ಸಿಎಂ ಸಿದ್ದರಾಮಯ್ಯ

ಮೆಜೆಸ್ಟಿಕ್: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಮೆಜೆಸ್ಟಿಕ್‌ನಲ್ಲಿರುವ ರಾಯಣ್ಣ ಅವರ ಪ್ರತಿಮೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದರೆ ಯುವಕರಿಗೆ ಸ್ಪೂರ್ತಿ, ಇದರಿಂದಲೇ ಇವತ್ತಿಗೂ ಜನ ನಂದಗಡಕ್ಕೆ ಹೋಗಿ ರಾಯಣ್ಣನ ತ್ಯಾಗ ಬಲಿದಾನವನ್ನು ನೆನೆಯುತ್ತಾರೆ ಎಂದು ಹೇಳಿದರು. ಜೊತೆಗೆ ರಾಜ್ಯದ ಎಲ್ಲಾ ಜನತೆಗೆ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ರಾಜ್ಯದ ಜನತೆಗೆ ಹಾಗೂ ದೇಶದ ಜನತೆಗೆ 80ನೇ ಸ್ವಾತಂತ್ರ್ಯದ ದಿನದ ಶುಭಾಶಯಗಳು ಹಾಗೂ ಇದೇ ದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನವನ್ನು ಕೂಡ ಆಚರಿಸಲಾಗಿದ್ದು, ಕಾಕತಾಳೀಯ ಎಂದರೆ ಸ್ವಾತಂತ್ರ್ಯ ಬಂದ ದಿನದಂದು ಅವರು ಹುಟ್ಟಿದ್ದು, ಸಂವಿಧಾನ ಬಂದ ದಿನವೇ ರಾಯಣ್ಣನನ್ನು ಗಲ್ಲಿಗೇರಿಸಿದ ದಿನವಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದರೆ ಯುವಕರಿಗೆ ಸ್ಪೂರ್ತಿ ಮಾಜಿ ಸಿಎಂ ಸಿದ್ದರಾಮಯ್ಯ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮನ ಬಂಟ ಹಾಗೂ ಅಂಗರಕ್ಷಕ ವಿಭಾಗದಲ್ಲಿ ಮುಖ್ಯಸ್ಥರಾಗಿ ದೇಶಕ್ಕಾಗಿ ಹೋರಾಟ ಮಾಡಿದರು. ನಾನು ಮುಖ್ಯಮಂತ್ರಿಯಾದ ಸಂದರ್ಭ ರಾಯಣ್ಣ ಹುಟ್ಟಿದ ಸ್ಥಳಕ್ಕೆ ಸರ್ಕಾರದಿಂದ ಭೂಮಿ ನೀಡಿ, ಮ್ಯೂಸಿಯಂ ಕೂಡ ಮಾಡಿದೆವು.

ಕಿತ್ತೂರು ರಾಣಿಚೆನ್ನಮ್ಮ ಅವರ ಬಂಧನವಾದ ಮೇಲೆ, ರಾಯಣ್ಣ ಅವರು ಕಾಡಿನಲ್ಲಿ ಒಂದು ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಸಮರ ಸಾರಿದರು. ಆದರೆ ಬ್ರಿಟಿಷರು ಕುತಂತ್ರದಿಂದ ನಮ್ಮ ಮೇಲೆ ದಸ್ತಗಿರಿ ಮಾಡುತ್ತಾರೆ. ರಾಯಣ್ಣ ಬಹಳ ವರ್ಷ ಬದುಕಲಿಲ್ಲ ಕೇವಲ 35 ವರ್ಷಕ್ಕೆ ನಂದಗಡದಲ್ಲಿ ಗಲ್ಲಿಗೇರುವ ಮೂಲಕ ರಾಯಣ್ಣ ದೇಶಕ್ಕೆ ಪ್ರಾಣತ್ಯಾಗ ಮಾಡುತ್ತಾರೆ.

ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿಇಂದು 560ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಸ್ಮರಣೆ ಮಾಡುತ್ತ ಯುವಕರು ಸ್ಪೂರ್ತಿ ಪಡೆಯುತ್ತಿದ್ದಾರೆ.

Share with Friends
author avatar
Digital Desk