Latestತುಮಕೂರು-Tumakuru

ರೈತನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ತಾವರೆಕೆರೆ ಪೊಲೀಸರು..!

ತುಮಕೂರು: ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ರೈತರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಘಟನೆ ಸಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಚಿತ್ರದುರ್ಗದಿಂದ ಬೆಂಗಳೂರಿನತ್ತ ಟೊಮ್ಯಾಟೊ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಧ್ಯರಾತ್ರಿ ಸುಮಾರು 1 ಗಂಟೆಗೆ ಅಪಘಾತಕ್ಕೀಡಾಗಿತ್ತು.

ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ನೂರಾರು ಟೊಮ್ಯಾಟೊ ಕ್ರೇಟ್‌ಗಳು ರಸ್ತೆ ಹಾಗೂ ಸುತ್ತಮುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಇದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿತ್ತು.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ರೈತನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ತಾವರೆಕೆರೆ ಪೊಲೀಸರು

ರಸ್ತೆಯ ಮೇಲೆ ಬಿದ್ದ ಟೊಮ್ಯಾಟೊ ಕ್ರೇಟ್‌ಗಳನ್ನು ಪೊಲೀಸರು ಸ್ವತಃ ಗ್ರೇಟ್‌ಗಳಲ್ಲಿ ತುಂಬಿ ರೈತರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದರು. ಜೊತೆಗೆ ರಸ್ತೆಯನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕಷ್ಟದಲ್ಲಿರುವ ರೈತರಿಗೆ ನೆರವಾದ ತಾವರೆಕೆರೆ ಪೊಲೀಸರ ಕಾರ್ಯ ಶ್ಲಾಘನೀಯ” ಎಂದು ಜನರು ಮೆಚ್ಚಿಕೊಂಡಿದ್ದಾರೆ.ರೈತರ ಬೆಳೆಯನ್ನು ರಕ್ಷಿಸುವುದರ ಜೊತೆಗೆ ಹೆದ್ದಾರಿಯ ಸಂಚಾರವನ್ನು ಪುನಃಸ್ಥಾಪಿಸಿದ ಪೊಲೀಸರ ಕೆಲಸ ಸಮಾಜಕ್ಕೆ ಮಾದರಿಯಾಗಿದೆ.

Share with Friends
author avatar
Digital Desk