
ಚೆನ್ನಮ್ಮ ನಿಧನಕ್ಕೆ ಶಾಸಕ ವಿಠಲ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಂತಾಪ..!
“ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ವಿಜಯಪುರ ನಗರ ಮತಕ್ಷೇತ್ರದ ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಾಗೂ ನಾಗಠಾಣ ಶಾಸಕ ವಿಠಲ ಸಂತಾಪ ವ್ಯಕ್ತಪಡಿಸಿದ್ದಾರೆ.”
ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿರುವ ಶಾಸಕ ಯತ್ನಾಳ್ ಹಾಗೂ ನಾಗಠಾಣ ಶಾಸಕ ವಿಠಲ ಮಾಜಿ ಪ್ರಧಾನಿ ದೇವೇಗೌಡರ ಸುದೀರ್ಘ ರಾಜಕೀಯ ಭವಿಷ್ಯ ಹಾಗೂ ಯಶಸ್ಸಿನ ಹಿಂದೆ ಚೆನ್ನಮ್ಮ ಅವರ ಪಾತ್ರ ಅತ್ಯಂತ ದೊಡ್ಡದಾಗಿತ್ತು. ಅವರು ಅಪಾರ ದೈವಭಕ್ತರಾಗಿದ್ದರು.
ನಾನು ಅವರ ಮನೆಗೆ ಭೇಟಿ ನೀಡಿದ್ದ ಹಲವು ಸಂದರ್ಭಗಳಲ್ಲಿ ಅದನ್ನು ಖುದ್ದಾಗಿ ಗಮನಿಸಿದ್ದೇನೆ. ಪ್ರತಿದಿನ ತಪ್ಪದೇ ಗೋ ಪೂಜೆ ಹಾಗೂ ಸೂರ್ಯ ನಮಸ್ಕಾರ, ಪೂಜೆಗಳನ್ನು ಅವರು ನೆರವೇರಿಸುತ್ತಿದ್ದರು. ಆ ದೈವಭಕ್ತಿ ಮತ್ತು ಪೂಜಾ ಫಲದ ಶಕ್ತಿಯಿಂದಲೇ ಇಂದು ದೇವೇಗೌಡರು ಹಾಗೂ ಅವರ ಇಡೀ ಕುಟುಂಬ ರಾಜಕೀಯದಲ್ಲಿ ಇಷ್ಟೊಂದು ಉನ್ನತ ಸ್ಥಾನಮಾನಗಳನ್ನು ಕಾಣಲು ಸಾಧ್ಯವಾಗಿದೆ” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಮರಿಸಿದ್ದಾರೆ.

“ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಹಾಗೂ ಒಬ್ಬ ಯಶಸ್ವಿ ರಾಜಕಾರಣಿಯಾಗಿ ಹೊರಹೊಮ್ಮಲು ಅವರ ಪತ್ನಿ ಚೆನ್ನಮ್ಮ ಅವರೇ ಪ್ರಮುಖ ಕಾರಣೀಕರ್ತರಾಗಿದ್ದರು. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯ ಕೈ ಇರುತ್ತದೆ ಎಂಬ ಜನಪ್ರಿಯ ಗಾದೆ ಮಾತಿಗೆ ಚೆನ್ನಮ್ಮ ಅವರೇ ಅತ್ಯುತ್ತಮ ಪುರಾವೆಯಾಗಿದ್ದರು” ಎಂದು ನಾಗಠಾಣ ಶಾಸಕ ವಿಠಲ ಮಾತನಾಡಿದಾರೆ.

ವಯೋಸಹಜ ಅನಾರೋಗ್ಯದಿಂದ ವಿಧಿವಶರಾದ ಮಾತೃಶ್ರೀ ಚೆನ್ನಮ್ಮ ಅವರ ಅಗಲಿಕೆಯಿಂದ ಇಡೀ ರಾಜ್ಯದ ಜನತೆ ತೀವ್ರ ಶೋಕದಲ್ಲಿದ್ದು, ನಾವೆಲ್ಲರೂ ಈ ದುಃಖದಲ್ಲಿ ಭಾಗಿಯಾಗಿದ್ದೇವೆ. ಭಗವಂತನು ಮೃತರ ಆತ್ಮಕ್ಕೆ ಮುಕ್ತಿ ನೀಡಲಿ ಹಾಗೂ ಅವರು ಮತ್ತೊಮ್ಮೆ ಪುಣ್ಯಭೂಮಿಯಲ್ಲಿ ಪುನರ್ಜನ್ಮ ಪಡೆಯುವಂತಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಅಗಲಿದ ಹಿರಿಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
