Crime NewsLatestಧಾರವಾಡ-Dharwad

ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಪಾಪಿ ಪತಿ ಜೀವಾವಧಿ ಶಿಕ್ಷೆ..!

ಧಾರವಾಡ ಜಿಲ್ಲೆ: ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮದ ಗುರುಶಾಂತಪ್ಪ ಅನವಾಲದನಿ ಎಂಬಾತ ತನ್ನ ಪತ್ನಿ ಪಾರವ್ವ ಹಾಗೂ ಮನೆಯ ಸದಸ್ಯರು ತನ್ನ ಮೇಲೆ ಮಾಟಮಂತ್ರ ಮಾಡಿದ್ದಾರೆ ಎಂದು ಆರೋಪಿ ನಿರಂತರ ಕಿರುಕುಳ ನೀಡುತ್ತಿದ್ದನು.

ಇದೇ ವಿಚಾರವಾಗಿ 2024ರ ಮಾರ್ಚ್ 30ರಂದು ನಸುಕಿನ ವೇಳೆ ಮಲಗಿದ್ದ ಪತ್ನಿ ಪಾರವ್ವಳ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದನು. ಜೊತೆಗೆ, ಮೃತಳ ಪಕ್ಕದಲ್ಲೇ ಮಲಗಿದ್ದ ಸಂಬಂಧಿ ರೇಣವ್ವ ಕಿತ್ತಳಿಗೆ ಜೀವ ಬೆದರಿಕೆ ಹಾಕಿದ್ದನು.

ಘಟನೆ ಸಂಬಂಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ನವಲಗುಂದ ವೃತ್ತದ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಸ್. ಕಪ್ಪತ್ತನವರ್ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪೂರ್ಣಿಮಾ ಪೈ ಅವರು ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾದ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪಿ.ಎಸ್. ತೊರಗಲ್ ವಾದ ಮಂಡಿಸಿದ್ದರು. ಪ್ರಕರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.

Share with Friends
author avatar
Digital Desk