
ಬಂಟ್ವಾಳ ಮಾರಕಾಸ್ತ್ರಗಳಿಂದ ಯುವತಿಯೊಬ್ಬಳ ಹತ್ಯೆ..!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಭೀಕರ ಘಟನೆಯೋಂದು ಜನರನ್ನು ಬೆಚ್ಚಿಬೀಳಿಸುತ್ತಿದೆ.ಜನನಿಬಿಡ ಬಸ್ ನಿಲ್ದಾಣದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಈ ಘಟನೆಯಿಂದ ಇಡೀ ಕರಾವಳಿ ಜಿಲ್ಲೆ ಬೆಚ್ಚಿಬಿದ್ದಿದೆ, ಯುವತಿಯೊಬ್ಬಳನ್ನು ಒನ್ ಸೈಡೆಡ್ ಪ್ರೇಮಿಯೊಬ್ಬ ಬಂಟ್ವಾಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನರ್ಸಿಂಗ್ ಹೋಂನಲ್ಲಿ ಲಾವಣ್ಯ ಎಂಬ ಯುವತಿ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗಲು ಬಸ್ ಹತ್ತಿದ್ದಾಳೆ. ಈ ವೇಳೆ ಆಕೆಯ ಪಕ್ಕದಲ್ಲೇ ಬಂದು ಕುಳಿತ ಹಂತಕ ಚೇತನ್ ಕಲ್ಲಡ್ಕ ಎಂಬಾತ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದರಿಂದ ಭಯಭೀತಳಾದ ಲಾವಣ್ಯ ತಕ್ಷಣವೇ ಬಸ್‌ನಿಂದ ಇಳಿದು ಜೀವ ಉಳಿಸಿಕೊಳ್ಳಲು ಓಡಿದ್ದಾಳೆ. ಆದರೆ ರಾಕ್ಷಸನಂತೆ ವರ್ತಿಸಿದ ಚೇತನ್, ನೂರಾರು ಜನರ ಕಣ್ಣೆದುರೇ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕಣ್ಣೆದುರೇ ನಡೆದ ಈ ಭೀಕರ ಹತ್ಯೆಯನ್ನು ಕಂಡು ಬಂಟ್ವಾಳದ ಜನರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಕ್ರೂರಿ ಹಂತಕ ಚೇತನ್‌ನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ತೀವ್ರ ಆಗ್ರಹ ವ್ಯಕ್ತಪಡಿಸಿವೆ. ಘಟನೆಯನ್ನು ಖಂಡಿಸಿ ಇಂದು ಬಿಸಿ ರೋಡ್ ಹಾಗೂ ಕಲ್ಲಡ್ಕದಲ್ಲಿ ಬೃಹತ್ ಪ್ರತಿಭಟನೆಗೆ ಸಾರ್ವಜನಿಕರು ಸಿದ್ಧತೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
