Entertainmentಸ್ಯಾಂಡಲ್​ವುಡ್-Sandalwood

ಕಿಚ್ಚನ ‘ಮಾಕ್ಸ್’ ಟ್ರೈಲರ್‌ಗೆ ಅಭಿಮಾನಿಗಳು ಫಿದಾ, ಡಿ.25 ರಂದು ಚಿತ್ರ ತೆರೆಗೆ

ಚಿತ್ರದುರ್ಗ : ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡಿ.25 ರಂದು ಚಿತ್ರ ತೆರೆಗೆ ಬರಲಿದೆ. ಮಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಗೊಂಡು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ವೀಕ್ಷಿಸಿದ್ದು, ನೆಚ್ಚಿನ ನಟ ಕಿಚ್ಚನ ರಗಡ್ ಲುಕ್ ಹಾಗೂ ನಟನೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ವಿಶೇಷ ಅಂದರೆ ಮಾಕ್ಸ್ ಕ್ರಿಸ್ ಮಸ್ ದಿನದಂದೇ ಬೆಳ್ಳಿ ಪರದೆಯ ಮೇಲೆ ಅಪ್ಪಳಿಸಲಿದ್ದು, ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆ. ಇನ್ನು ಟ್ರೇಲರ್‌ನಲ್ಲಿ ಸುದೀಪ್ ಜೊತೆಗೆ ಬಿಗ್‌ಬಾಸ್‌ ಕನ್ನಡದ ಸ್ಪರ್ಧಿ ಉಗ್ರಂ ಮಂಜು ಕೂಡಾ ಪ್ರಮುಖ ಆಕರ್ಷಣೆಯಾಗಿದ್ದಾರೆ.

ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ಸಂಯೋಜನೆ ನಡೆಸಿದ್ದು, ವಿ ಕ್ರಿಯೇಶನ್ಸ್ ಹಾಗೂ ಕಿಚ್ಚ ಕ್ರಿಯೇಶನ್ಸ್ ನಿರ್ಮಾಣ ಮಾಡಿದೆ.

Share with Friends
author avatar
News Desk