Crime Newsಬೆಂಗಳೂರು-Bengaluru

ಡಿಜಿಟಲ್​ ಅರೆಸ್ಟ್​ ಮಾಡಿ ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​​​ಗೆ 11 ಕೋಟಿ ರೂ. ಪಂಗನಾಮ

ಬೆಂಗಳೂರು : ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರೆಂದು ಹೇಳಿಕೊಂಡು ಸೈಬರ್​ ವಂಚಕರು ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​​​ಗೆ 11 ಕೋಟಿ ರೂ. ವಂಚನೆ ಮಾಡಿದ್ದಾರೆ. ವಿಜಯ್ ಕುಮಾರ್​​ ವಂಚನೆ ಒಳಗಾದ ಸಾಫ್ಟ್​ವೇರ್​ ಇಂಜಿನಿಯರ್. ಈ ಕುರಿತು ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ್ ಕುಮಾರ್ ಮೋಸ ಹೋಗಿದ್ದು ಹೇಗೆ..?
ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರೆಂದು ಹೇಳಿಕೊಂಡು ಸೈಬರ್​ ವಂಚಕರು ವಿಜಯ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ. “ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದೆ. ನಿಮ್ಮ ಆಧಾರ್ ಕಾರ್ಡ್​ ಬಳಸಿಕೊಂಡು ಹಣ ವರ್ಗಾವಣೆಯಾಗಿದೆ. 6 ಕೋಟಿ ರೂ. ವಂಚನೆಯಾಗಿದೆ.

ಈಗ ಕೇಸ್​ ಸುಪ್ರೀಂಕೋರ್ಟ್​​ನಲ್ಲಿ ಇದೆ ಎಂದು ಹೆದರಿಸಿದ್ದಾರೆ. ಬಳಿಕ, ವಂಚಕರು ವಿಡಿಯೋ ಕಾಲ್ ಮಾಡಿ ಒಂದು‌ ತಿಂಗಳ ಕಾಲ ವಿಜಯ್ ಕುಮಾರ್ ​ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಒಂದು ತಿಂಗಳ ಕಾಲ ಮನೆಯಲ್ಲಿ ಇರದಂತೆ ಹೇಳಿದ್ದಾರೆ. ಹೀಗಾಗಿ ವಿಜಯ್ ಕುಮಾರ್ ಅವರು ಯಲಹಂಕದ ಲಾಡ್ಜ್​ವೊಂದರಲ್ಲಿ ಇದ್ದರು.

ವಿಜಯ್ ಕುಮಾರ್ ಕಳೆದ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನೇ ಟಾರ್ಗೆಟ್​ ಮಾಡಿದ ಸೈಬರ್ ವಂಚಕರು ಟೆಕ್ಕಿ ವಿನಯ್​ ಕುಮಾರ್​ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ಬಳಿಕ ಹಂತ ಹಂತವಾಗಿ ಒಂದು ತಿಂಗಳ ಕಾಲ ವಿನಯ್​ ಕುಮಾರ್​ ಅವರಿಂದ 11 ಕೋಟಿ 83 ಕೋಟಿ ರೂ. ಅನ್ನು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

Share with Friends
author avatar
News Desk