BlogLatestTop Storiesರಾಷ್ಟ್ರೀಯ-National

ಮೀನುಗಾರಿಕೆ ದೋಣಿಯಲ್ಲಿ ಸಾಗಿಸುತ್ತಿದ್ದ 5 ಟನ್ ಡ್ರಗ್ಸ್ ವಶ : ಇತಿಹಾಸದಲ್ಲಿ ಬಹುದೊಡ್ಡ ಜಪ್ತಿ

ಅಂಡಮಾನ್​​: ಭಾರತೀಯ ಕೋಸ್ಟ್ ಗಾರ್ಡ್ ಮಹತ್ವದ ಕಾರ್ಯಾಚರಣೆಯಲ್ಲಿ ಅಂಡಮಾನ್ ಭಾಗದಲ್ಲಿ ಮೀನುಗಾರಿಕೆ ದೋಣಿಯಿಂದ ಸುಮಾರು ಐದು ಟನ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಭಾರತೀಯ ಕೋಸ್ಟ್ ಗಾರ್ಡ್‌ನ ಇತಿಹಾಸದಲ್ಲೆ ಇದುವರೆಗೂ ವಶಪಡಿಸಿಕೊಂಡಿರುವ ಅತಿದೊಡ್ಡ ಮಾದಕವಸ್ತು ರವಾನೆ ಎಂದು ಹೇಳಲಾಗುತ್ತಿದೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ‘ಸಾಗರ್ ಮಂಥನ್ – 4’ ಹೆಸರಿನ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹೇಳಿಕೆಯಲ್ಲಿ ತಿಳಿಸಿದೆ. ಈ ಕಾರ್ಯಾಚರಣೆಯನ್ನು ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ನಡೆಸಿದೆ.

ವಶಪಡಿಸಿಕೊಂಡಿರುವ ಸರಕಿನಲ್ಲಿ ಸುಮಾರು ಐದು ಟನ್ ಡ್ರಗ್ಸ್ ಇದೆ ಎಂದು ರಕ್ಷಣಾ ಅಧಿಕಾರಿಗಳು ಸೋಮವಾರ (ನವೆಂಬರ್​​​ 25) ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಂಡಮಾನ್ ನೀರಿನಲ್ಲಿ ಈ ಕ್ರಮಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಅನುಮಾನಾಸ್ಪದ ವ್ಯಕ್ತಿಗಳ ತನಿಖೆ, ವಶಪಡಿಸಿಕೊಂಡ ಸರಕು ಮತ್ತು ದೋಣಿಗೆ ಸಂಬಂಧಿಸಿದ ವಿವರಗಳ ಕಾರ್ಯಾಚರಣೆ ಮುಂದುವರಿದಿದೆ.

ಈ ತಿಂಗಳ ಆರಂಭದಲ್ಲಿ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡವು, ಇದನ್ನು ಮೆಥ್ ಎಂದೂ ಕರೆಯುತ್ತಾರೆ. ಗುಜರಾತ್ ಕರಾವಳಿಯ ಭಾರತೀಯ ಪ್ರಾದೇಶಿಕ ಜಲದಿಂದ ಎಂಟು ಇರಾನ್ ಪ್ರಜೆಗಳನ್ನು ಬಂಧಿಸಿದರು.

Share with Friends
author avatar
News Desk