BlogLatestಬೆಂಗಳೂರು-Bengaluru

ಬೆಂಗಳೂರಲ್ಲಿ ಜೋಡಿ ಕೊಲೆ, ಶೆಡ್‌ನಲ್ಲಿ ಇಬ್ಬರ ಭೀಕರ ಹತ್ಯೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಶೆಡ್‌ನಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಸಿಂಗಹಳ್ಳಿಯಲ್ಲಿ ನಡೆದಿದೆ.

ಸಿಂಗಹಳ್ಳಿ ಗ್ರಾಮದ ಬಳಿ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಬಸ್‌ಗಳ ಪಾರ್ಕ್‌ ಮಾಡುವ ಜಾಗದಲ್ಲಿ ಇಬ್ಬರು ವ್ಯಕ್ತಿಗಳ ಶವ ಪತ್ತೆಯಾಗಿದೆ. ಮೃತರನ್ನು ಖಾಸಗಿ ಬಸ್‌ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಗೇಶ್‌ (55) ಹಾಗೂ ಮಂಜುನಾಥ್‌ (50) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಇಬ್ಬರೂ ಕುಡಿದಿದ್ದು, ಗಲಾಟೆ ಮಾಡಿಕೊಂಡು ಪರಸ್ಪರ ಹೊಡೆದಾಡಿ ಮೃತಪಟ್ಟಿದ್ದಾರೋ ಅಥವಾ ಬೇರೆ ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Share with Friends
author avatar
News Desk