BlogEntertainmentಸ್ಯಾಂಡಲ್​ವುಡ್-Sandalwood

ಟಾಕ್ಸಿಕ್ ಚಿತ್ರಕ್ಕಾಗಿ ಭಾರತಕ್ಕೆ ಬಂದ ಹಾಲಿವುಡ್ ಆಕ್ಷನ್ ಡೈರೆಕ್ಟರ್

ಮುಂಬೈ : ಕೆ.ಜಿ.ಎಫ್. ಚಾಪ್ಟರ್ 2 ನಂತರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ.ಟಾಕ್ಸಿಕ್ ಬಗ್ಗೆ ಸಿನಿಮಾ ತಂಡ ಹೆಚ್ಚಿನ ಯಾವುದೇ ಸುಳಿವು ಬಿಟ್ಟುಕೊಡದಿದ್ದರೂ, ಚಿತ್ರದಲ್ಲಿನ ಕಲಾವಿದರು, ತಂತ್ರಜ್ಞರ ವಿಚಾರವಾಗಿ ಆಗಾಗ್ಗೆ ಟಾಕ್ಸಿಕ್ ಸುದ್ದುಯಾಗುತ್ತಲೇ ಇರುತ್ತದೆ. ಈಗ ಅಂಥದ್ದೇ ಮತ್ತೊಂದು ಬಿಗ್ ಅಪ್ಡೇಟ್ ಸಿಕ್ಕಿದೆ.

ಈಗಾಗಲೇ ತಿಳಿದಿರುವಂತೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾವನ್ನು ಬಹಳ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕೇವಲ ಭಾರತದ ಸ್ಟಾರ್ ಗಳು ಮಾತ್ರವಲ್ಲದೆ ಹಾಲಿವುಡ್ ನಟರೂ ಕೂಡ ಈ ಸಿನಿಮಾದಲ್ಲಿದ್ದಾರೆ. ಇದೀಗ ಹಾಲಿವುಡ್ ನ ಅತ್ಯುತ್ತಮ ತಂತ್ರಜ್ಞರು ಸಹ ಟಾಕ್ಸಿಕ್ ಸಿನಿಮಾಕ್ಕೆ ಸೇರ್ಪಡೆಗೊಂಡಿದ್ದಾರೆ.

ಹಾಲಿವುಡ್​ನ ಐಕಾನಿಕ್ ಸಿನಿಮಾಗಳಾದ ‘ಐರನ್ ಮ್ಯಾನ್’, ‘ಎಕ್ಸ್ ಮ್ಯಾನ್’, ‘ಜಾನ್ ವಿಕ್ 2’ರೀತಿಯ ಅದ್ಭುತ ಸಿನಿಮಾಗಳಿಗೆ ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್ ಕಟ್ಟಿಕೊಟ್ಟಿರುವ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಮುಂಬೈಗೆ ಬಂದಿದ್ದಾರೆ. ಆ ಮೂಲಕ ವಿಶ್ವ ಸಿನಿಮಾ ರಂಗದ ಮತ್ತೊಂದು ದೈತ್ಯ ಪ್ರತಿಭೆ ಟಾಕ್ಸಿಕ್ ಸಿನಿಮಾ ತಂಡವನ್ನು ಸೇರಿಕೊಂಡಿದೆ.

ಟಾಕ್ಸಿಕ್ ಸಿನಿಮಾದ ಮೊದಲ ಷೆಡ್ಯೂಲ್ ಬೆಂಗಳೂರಿನ ಎಚ್​ಎಂಟಿಯಲ್ಲಿ ಸೆಟ್​ ಪೂರ್ಣಗೊಂಡಿದ್ದು, ಇದೀಗ ಚಿತ್ರೀಕರಣ ಮುಂಬೈಗೆ ಸ್ಥಳಾಂತರಗೊಂಡಿದ್ದು, 60 ದಿನಗಳ ಚಿತ್ರೀಕರಣದಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ಕೂಡ ನಡೆಯಲಿದ್ದು, ಇದೇ ಕಾರಣಕ್ಕಾಗಿ ಜೆಜೆ ಪೆರ್ರಿ ಆಗಮಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Share with Friends
author avatar
News Desk