ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ದೇವರಲ್ಲಿ ಬೇಡಿಕೊಂಡಿದ್ದೆ : ಭಾರಿ ಚರ್ಚೆಯಾಗುತ್ತಿದೆ ಸಿಜೆಐ ಚಂದ್ರಚೂಡ್ ಹೇಳಿಕೆ
ನವದೆಹಲಿ: ಅಯೋಧ್ಯೆ ರಾಮ ಮಂದಿರ ಪ್ರಕರಣದ ತೀರ್ಪಿಗೆ ಸಂಬಂಧ ಪಟ್ಟಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಹೇಳಿರುವ ಹೇಳಿಕೆಯೊಂದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಂಬಿಕೆ ಇದ್ದವರ ಪಾಲಿಗೆ ದೇವರು ದಾರಿ ತೋರಿಸುತ್ತಾನೆ ಎಂದೂ ಚಂದ್ರಚೂಡ್ ಹೇಳಿದ್ದಾರೆ. ತಮ್ಮ ಹುಟ್ಟೂರಾದ ಪುಣೆಯ ನಿವಾಸಿಗಳೊಂದಿಗೆ ಅವರು ಮಾತನಾಡಿದರು.
‘ನಮ್ಮ ಮುಂ ದೆ ಪ್ರಕರಣಗಳು ಬರುವುದು, ನಮಗೆ ಪರಿಹಾರ ಕಂಡುಕೊಳ್ಳಲು ಆಗದೆ ಇರುವುದು ಬಹಳ ಸಾಮಾನ್ಯ. ನನ್ನ ಮುಂದೆ ಮೂರು ತಿಂಗಳು ಇದ್ದ ಅಯೋಧ್ಯೆ ಪ್ರಕರಣದ ಸಂದರ್ಭ ದಲ್ಲಿಯೂಇದೇ ರೀತಿ ಆಯಿತು. ದೇವರ ಮುಂದೆ ಕುಳಿತು ನಾನು, ಇದಕ್ಕೆ ನೀನೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ’ ಎಂದರು.
ತಾವುಯಾವಾಗಲೂ ಪ್ರಾರ್ಥ ನೆ ಸಲ್ಲಿಸುವುದಾಗಿ ಹೇಳಿದ ಚಂದ್ರಚೂಡ್, ‘ನಿಮಗೆ ನಂ ಬಿಕೆ ಇದ್ದರೆ ದೇ ವರು ಯಾವಾಗಲೂ ಒಂದು ದಾರಿ ತೋರಿಸುತ್ತಾನೆ’ ಎಂದರು. ಅಯೋ ಧ್ಯೆ ಪ್ರಕರಣದ ತೀ ರ್ಪು ನೀಡಿದ ಐವರು ನ್ಯಾಯಮೂರ್ತಿ ಗಳ ಪೀ ಠದಲ್ಲಿ ಚಂ ದ್ರಚೂಡ್ ಅವರೂ ಇದ್ದರು.
2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ನ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿ, ಸುಮಾರು 70 ವರ್ಷಗಳ ಕಾನೂನು ವಿವಾದವನ್ನು ಇತ್ಯರ್ಥಪಡಿಸಿ ತೀರ್ಪು ಪ್ರಕಟಿಸಿತ್ತು. ಆಗಿನ ಸಿಜೆಐ ರಂಜನ್ ಗೊಗೊಯ್, ಹಾಲಿ ಸಿಜೆಐ ಡಿವೈ ಚಂದ್ರಚೂಡ್, ನಿವೃತ್ತರಾಗಿರುವ ಸಿಜೆಐ ಎಸ್ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು ಒಮ್ಮತದ ತೀರ್ಪು ಪ್ರಕಟಿಸಿತ್ತು.
