BlogLatestTop Storiesರಾಷ್ಟ್ರೀಯ-National

ಗ್ಯಾರಂಟಿಗಳಿಂದ ಹಿಮಾಚಲ ಪ್ರದೇಶ ದಿವಾಳಿ, “ಟಾಯ್ಲೆಟ್ ಟ್ಯಾಕ್ಸ್” ವಿಧಿಸಲು ಮುಂದಾದ ಕಾಂಗ್ರೆಸ್ ಸರ್ಕಾರ

ಶಿಮ್ಲಾ: ಗ್ಯಾರಂಟಿಗಳ ಹೊಡೆತದಿಂದ ಕಂಗೆಟ್ಟಿರುವ ಹಿಮಾಚಲ ಸರ್ಕಾರ ಈಗಾಗಲೇ ಕ್ಯಾಬಿನೆಟ್‌ ಸಚಿವರಿಗೆ 2 ತಿಂಗಳ ವೇತನ ಕಡಿತಗೊಳಿಸಿದೆ. ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಕಡಿತಗೊಳಿಸುವ ಮಸೂದೆಯನ್ನೂ ಅಂಗೀಕರಿಸಿದೆ. ಈ ಬೆನ್ನಲ್ಲೇ ಶೌಚಾಲಯ ಆಸನಗಳನ್ನು ಆಧರಿಸಿ ತೆರಿಗೆ ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಡಿದೆ.

ಉಚಿತ ಗ್ಯಾರಂಟಿಗಳಿಂದ ಆರ್ಥಿಕ ಬಿಕ್ಕಟು ಎದುರಿಸುತ್ತಿರುವ ಹಿಮಾಚಲ ಪ್ರದೇಶ ಸರ್ಕಾರ ಇದೀಗ ಶೌಚಾಲಯಳಿಗೆ ತೆರಿಗೆ (“ಟಾಯ್ಲೆಟ್ ಟ್ಯಾಕ್ಸ್” ) ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಿದಾಡುತ್ತಿದೆ.

ಈ‌ ನಡುವೆ ಶೌಚಾಲಯಗಳ ಮೇಲೆ ಯಾವುದೇ ಹೆಚ್ಚುವರಿ ಸೆಸ್ ವಿಧಿಸಿಲ್ಲ, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿಎಂ ಸುಖ್ವಿಂದರ್‌ ಸಿಂಗ್‌ ಸುಖು ಸ್ಪಷ್ಟನೆ ನೀಡಿದ್ದಾರೆ. ನೀರಿಗೆ ವಿಧಿಸುವ ತೆರಿಗೆಯಲ್ಲೇ ಶೇ.25 ಶೌಚಾಲಯ ತೆರಿಗೆಯೂ ಸೇರಿರುತ್ತದೆ. ಅದಕ್ಕೆ ಪ್ರತ್ಯೇಕವಾಗಿ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.

ಶಿಮ್ಲಾದಲ್ಲಿ ಈಗಾಗಲೇ ಒಳಚರಂಡಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಇನ್ನೂ ಶೌಚಾಲಯ ತೆರಿಗೆಯು ಹಳೆಯ ಅಧಿಸೂಚನೆಯಾಗಿದೆ. ಕೆಲವು ಹೋಟೆಲ್‌ಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಶೀಘ್ರದಲ್ಲೇ ಹೊಸ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Share with Friends
author avatar
News Desk