BlogLatestTop Storiesವಿದೇಶ-International

ಹಿಜ್ಬುಲ್ಲಾಗೆ ಮತ್ತೊಂದು ಮರ್ಮಾಘಾತ, ಇಸ್ರೇಲ್ ದಾಳಿಯಲ್ಲಿ ನೂತನ ಮುಖ್ಯಸ್ಥನ ಹತ್ಯೆ..?

ಬೈರುತ್‌ : ಇರಾನ್​ನ ಬೈರುತ್​ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನೂತನ ಮುಖ್ಯಸ್ಥ ಹಾಶೆಂ ಸೈಫೆದ್ದೀನ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಗುರುವಾರ ರಾತ್ರಿ ಬೈರುತ್‌ನಲ್ಲಿ ಇಸ್ರೇಲ್ ಭಾರಿ ಬಾಂಬ್ ದಾಳಿ ನಡೆಸಿತು. ಗುರುವಾರ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಸೈಫಿದ್ದೀನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಇಸ್ರೇಲ್ ಹಸನ್ ನಸ್ರಲ್ಲಾ ಅವರನ್ನು ಈ ರೀತಿ ಬಾಂಬ್ ಸ್ಫೋಟಿಸಿ ಕೊಂದಿತ್ತು.

ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಹತ್ಯೆ ನಡೆದು ವಾರ ಕಳೆಯುವ ಮುನ್ನವೇ ​ನಸ್ರಲ್ಲಾ ಉತ್ತರಾಧಿಕಾರಿಯನ್ನೂ ಇಸ್ರೇಲ್ ಉಡೀಸ್ ಮಾಡಿದೆ. ​ ಲೆಬನಾನ್ ಕೂಡ ಹೆಜ್ಬೊಲ್ಲಾದ ಹೊಸ ಮುಖ್ಯಸ್ಥನ ಹತ್ಯೆಯನ್ನು ದೃಢಪಡಿಸಿಲ್ಲ.

35 ವರ್ಷಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾದ ಮುಖ್ಯಸ್ಥರಾಗಿದ್ದ ಹಸನ್ ನಸ್ರಲ್ಲಾ ಅವರ ಸಾವಿನ ನಂತರ ಹಶೆಮ್ ಸೈಫೆದ್ದೀನ್ ಹಿಜ್ಬುಲ್ಲಾದ ಉತ್ತರಾಧಿಕಾರಿಯಾಗಿದ್ದರು.ಎರಡು ಇಸ್ರೇಲಿ ಮೂಲಗಳನ್ನು ಉಲ್ಲೇಖಿಸಿ ಆಕ್ಸಿಯೋಸ್‌ನ ಬರಾಕ್ ರವಿದ್, ಸೈಫೆದ್ದೀನ್ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಆದರೆ, ಇಸ್ರೇಲ್ ಸೇನೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2017ರಲ್ಲಿ ಹಶೆಂ ಸೈಫೆದ್ದೀನ್​ನನ್ನು ಅಮೆರಿಕ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು. ಹಶೇಂ ಹಿಜ್ಬುಲ್ಲಾ ಅವರ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಜಿಹಾದ್ ಕೌನ್ಸಿಲ್‌ನ ಪ್ರಮುಖ ಸದಸ್ಯನಾಗಿದ್ದ.

ಇರಾಕ್‌ನ ನಜಾಫ್ ಮತ್ತು ಇರಾನ್‌ನ ಕುಮ್ ಧಾರ್ಮಿಕ ಕೇಂದ್ರಗಳಲ್ಲಿ ಶಿಕ್ಷಣ ಪಡೆದ ಸೈಫೆದ್ದೀನ್, 1994 ರಲ್ಲಿ ಲೆಬನಾನ್‌ಗೆ ಮರಳಿದರು ಮತ್ತು ಶೀಘ್ರವಾಗಿ ಹಿಜ್ಬುಲ್ಲಾದ ಶ್ರೇಣಿಯಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದ.

Share with Friends
author avatar
News Desk