BlogEntertainment

ರಿಯಾ ಸಿಂಘಾಗೆ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ

ನವದೆಹಲಿ: ರಾಜಸ್ಥಾನದ ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆಯಲ್ಲಿ ಗುಜರಾತಿ ಯುವತಿ ರಿಯಾ ಸಿಂಘಾ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಅವರು ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ ಮಾತನಾಡಿ, ಮಿಸ್ ಯೂನಿವರ್ಸಿಟಿ ಇಂಡಿಯಾ ಪಟ್ಟ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ . ಈ ಮಟ್ಟಕ್ಕೆ ಬರಲು ಶ್ರಮಿಸಿದ್ದೇನೆ ಮತ್ತು ಇಲ್ಲಿಯವರೆಗೆ ಗೆದ್ದವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ರಿಯಾ ಹೇಳಿದ್ದಾರೆ. ನಟಿ ಮತ್ತು ಮಿಸ್ ಯೂನಿವರ್ಸ್ ಇಂಡಿಯಾ 2015 ರ ಉರ್ವಿ ರೌಟೇಲಾ ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಭಾಗವಹಿಸಿದ್ದರು. ನಟಿ ಊರ್ವಶಿ ರೌತೆಲಾ ಈ ಬಾರಿ ರಿಯಾ ಸಿಂಘಾ ಭಾರತಕ್ಕೆ ಕಿರೀಟ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

18 ವರ್ಷದ ರಿಯಾ ಸಿಂಘಾ ಗುಜರಾತ್ ಮೂಲದವರಾಗಿದ್ದು, ಸ್ಪರ್ಧೆಯಲ್ಲಿದ್ದ 50ಕ್ಕೂ ಅಧಿಕ ಚೆಲುವೆಯರನ್ನು ಹಿಂದಿಕ್ಕಿ ವಿಜೇತರಾಗಿದ್ದಾರೆ. ರಿಯಾ ಸಿಂಘಾ ಸೋಶಿಯಲ್ ಮೀಡಿಯಾದಲ್ಲಿ 39 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ರಿಯಾ ಸಿಂಘಾ  ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಕಿರೀಟ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ.

Share with Friends
author avatar
News Desk