BlogTop Storiesವಿದೇಶ-International

ಲೆಬನಾನ್ ಪೇಜರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಯ ಹೆಸರು ಲಿಂಕ್

ಬೈರುತ್‌: ಲೆಬನಾನ್, ಸಿರಿಯಾದಲ್ಲಿ ಇತ್ತೀಚೆಗೆ ನಡೆದ ಪೇಜರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರ ಕೈವಾಡ ಇದೆ ಎಂದು ಶಂಕಿಸಿರುವುದಾಗಿ ವರದಿಯಾಗಿದೆ.

ಲೆಬನಾನ್‌, ಸಿರಿಯಾದಲ್ಲಿ ನಡೆದ ಪೇಜರ್‌ ಬ್ಲಾಸ್ಟ್‌ ಘಟನೆ ಹಿಂದೆ 37 ವರ್ಷ ವಯಸ್ಸಿನ ಭಾರತೀಯ ಮೂಲದ ಉದ್ಯಮಿ ರಿನ್ಸನ್‌ ಜೋಸ್‌ ಕೈವಾಡ ಇರುವುದಾಗಿ ವರದಿಗಳು ಉಲ್ಲೇಖಿಸಿವೆ. ಜೋಸ್‌ ಬಲ್ಗೇರಿಯಾ ಮೂಲದ ನಾರ್ಟಾ ಗ್ಲೋಬಲ್‌ ಲಿಮಿಟೆಡ್‌ನ ಏಕೈಕ ಮಾಲೀಕರಾಗಿದ್ದು, ಸ್ಫೋಟಗೊಂಡ ಪೇಜರ್‌ಗಳ ಪೂರೈಕೆಯಲ್ಲಿ ಇವರ ಪಾಲೂ ಇದೆ ಎಂದು ಶಂಕಿಸಲಾಗಿದೆ.

ಪಾಂಡಿಚೇರಿ ವಿಶ್ವವಿದ್ಯಾನಿಲಯದಿಂದ MBA ಪದವಿ, ಓಸ್ಲೋ ಮೆಟ್ರೋಪಾಲಿಟಿಯನ್ ವಿಶ್ವವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿʼ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಜೋಸ್ ಒಂದು ದಶಕದ ಹಿಂದೆ ನಾರ್ವೆಗೆ ತೆರಳಿದ್ದರು. ಕೊನೆಯದ್ದಾಗಿ ನವೆಂಬರ್‌ನಲ್ಲಿ ತಮ್ಮ ಮನೆಗೆ ಭೇಟಿ ನೀಡಿ, ಜನವರಿಯಲ್ಲಿ ವಾಪಸ್‌ ತೆರಳಿದ್ದರು.

ಲೆಬನಾನ್, ಸಿರಿಯಾದಲ್ಲಿ ಇತ್ತೀಚೆಗೆ ಯಾರ ಊಹೆಗೂ ನಿಲುಕದ ರೀತಿಯಲ್ಲಿ ದಾಳಿಗಳು ನಡೆದಿವೆ. ಎರಡು ದೇಶಗಳಲ್ಲಿ ಒಂದೇ ದಿನ, ಒಂದೇ ಕ್ಷಣದಲ್ಲಿ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿದ್ದವು, ಈ ಬೆನ್ನಲ್ಲೇ ವಾಕಿಟಾಕಿ, ಸೋಲಾರ್‌ ಪ್ಯಾನಲ್‌ಗಳು ಸಹ ಸ್ಫೋಟಗೊಂಡು ತೀವ್ರ ಆತಂಕ ಸೃಷ್ಟಿಸಿದ್ದವು.

Share with Friends
author avatar
News Desk