BlogLatestTop Storiesವಿದೇಶ-International

ಲೆಬನಾನ್​ನಲ್ಲಿ ಸಾವಿರಾರು ಪೇಜರ್ಸ್ ಸ್ಫೋಟ, 9 ಮಂದಿ ಸಾವು, 3 ಸಾವಿರ ಜನರಿಗೆ ಗಾಯ

ಲೆಬನಾನ್​ : ಲೆಬನಾನ್​ನಲ್ಲಿ ಇದ್ದಕ್ಕಿದ್ದಂತೆ ಸಾವಿರಾರು ಪೇಜರ್ಸ್ ಸ್ಫೋಟಗೊಂಡು 9 ಮಂದಿ ಸಾವನ್ನಪ್ಪಿದ್ದು 3000ಕ್ಕೂ ಹೆಚ್ಚಿನ ಜನರು ಗಾಯಗೊಂಡ ಘಟನೆ ನಡೆದಿದೆ. ಪೇಜರ್​ಗಳ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹಿಜ್ಬುಲ್ಲಾ ದೂರಿದೆ. ಸ್ಫೋಟದಲ್ಲಿ ಗಾಯಗೊಂಡವರಲ್ಲಿ 200 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಸಂವಹನಕ್ಕಾಗಿ ಇತ್ತೀಚೆಗೆ ಹಿಜ್ಬುಲ್ಲಾ ಸಂಘಟನೆ ಪರಿಚಯಿಸಿದ್ದ ಪೇಜರ್ಸ್ ಎಂಬ ಸಾಧನಗಳು​. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟ ಸುಮಾರು 1 ಗಂಟೆಗಳ ಕಾಲ ನಡೆಯಿತು. ಸಾಧನಗಳು ಹೇಗೆ ಸ್ಫೋಟಗೊಂಡವು ಎನ್ನುವ ಕುರಿತು ಮಾಹಿತಿ ಇಲ್ಲ.

ಲೆಬನಾನಿನ ವಿದೇಶಾಂಗ ಸಚಿವಾಲಯವು ಬಾಂಬ್ ಸ್ಫೋಟಗಳನ್ನು ಅಪಾಯಕಾರಿ ಮತ್ತು ಉದ್ದೇಶಪೂರ್ವಕ ಇಸ್ರೇಲಿ ದಾಳಿ ಎಂದು ಹೇಳಿದೆ. ಲೆಬನಾನ್‌ನಾದ್ಯಂತ ಹಲವಾರು ವೈರ್‌ಲೆಸ್ ಸಂವಹನ ಸಾಧನಗಳನ್ನು ಸ್ಫೋಟಿಸಲಾಗಿದೆ ಎಂದು ಲೆಬನಾನಿನ ಆಂತರಿಕ ಭದ್ರತಾ ಪಡೆಗಳು ತಿಳಿಸಿವೆ.

ವಿಶೇಷವಾಗಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿರುವ ಹಿಜ್ಬುಲ್ಲಾ ಭದ್ರಕೋಟೆಯಲ್ಲಿ ಸ್ಫೋಟಗೊಂಡ ಪೇಜರ್‌ಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಜ್ಬೊಲ್ಲಾ ಪರಿಚಯಿಸಿದ ಹೊಸ ಮಾದರಿಗಳಾಗಿವೆ.

ಪ್ರತಿಕಾರಕ್ಕೆ ಹೆಜ್ಬೊಲ್ಲಾ ಪ್ರತಿಜ್ಞೆ :
ಪೇಜರ್‌ಗಳ ಸ್ಫೋಟ ಇಸ್ರೇಲಿ ಆಕ್ರಮಣವಾಗಿದ್ದು, ನಮ್ಮ ಸರ್ಕಾರ ಇದನ್ನು ಖಂಡಿಸುತ್ತದೆ ಎಂದು ಲೆಬನಾನ್‌ನ ಮಾಹಿತಿ ಸಚಿವ ಜಿಯಾದ್ ಮಕಾರಿ ಹೇಳಿದ್ದಾರೆ. ಪೇಜರ್ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂದು ಹಿಜ್ಬುಲ್ಲಾ ದೂಷಿಸಿದೆ ಮತ್ತು ಪ್ರತಿಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದೆ.

ಪೇಜರ್‌ಗಳ ಸ್ಫೋಟವು ಇಸ್ರೇಲ್‌ನೊಂದಿಗೆ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ಹಿಜ್ಬುಲ್ಲಾ ಗುಂಪು ಅನುಭವಿಸಿದ ದೊಡ್ಡ ಭದ್ರತಾ ಉಲ್ಲಂಘನೆಯಾಗಿದೆ ಎಂದು ಗುಂಪು ಹೇಳಿಕೊಂಡಿದೆ.

Share with Friends
author avatar
News Desk