BlogEntertainmentLatestTop Storiesಬಾಲಿವುಡ್​ - Bollywood

ಕಟ್ಟಡದಿಂದ ಜಿಗಿದು ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ

ಮುಂಬೈ : ಬಾಲಿವುಡ್​ನ ಖ್ಯಾತ ನಟಿ, ರೂಪದರ್ಶಿಯಾಗಿರುವ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬುಧವಾರ ಮುಂಬೈನ ಬಾಂದ್ರಾದಲ್ಲಿ ತಮ್ಮ ಮನೆಯ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸ್ ತಿಳಿಸಿದ್ದಾರೆ. ಮುಂಬೈನ ತಮ್ಮ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಮಲೈಕಾರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.

ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯ ನಂತರ ಮಲೈಕಾ ಕುಟುಂಬ ಮತ್ತು ಆಕೆಯ ಪರಿಚಯಸ್ಥರು ಆಘಾತಕ್ಕೊಳಗಾಗಿದ್ದಾರೆ. ಮಲೈಕಾ ಅರೋರಾ ಚಿತ್ರೀಕರಣಕ್ಕಾಗಿ ಪುನಾಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಂಬೈಗೆ ರವಾನೆಯಾಗಿದ್ದಾರೆ. ಮಲೈಕಾ ಅರೋರಾರ ಸಹೋದರಿ ಅಮೃತ್ ಅರೋರಾ ಸಹ ತಂದೆಯ ಸಾವಿನ ವಿಷಯ ತಿಳಿದು ಮುಂಬೈಗೆ ವಾಪಸ್ಸಾಗಿದ್ದಾರೆ. ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಭಾರತದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಅನಿಲ್ ಅರೋರಾರ ಮೃತ ದೇಹವನ್ನು ಮುಂಬೈನ ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಗಳಿಗೆ ನೀಡಲಾಗುವುದೆಂದು ತಿಳಿಸಲಾಗಿದೆ. ಅನಿಲ್ ಅವರದ್ದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದರೋ ಎಂಬ ಬಗ್ಗೆ ಅನುಮಾನವಿರುವುದಾಗಿ ಪೊಲೀಸರು ಹೇಳಿದ್ದಾರೆ.

Share with Friends
author avatar
News Desk