BlogLatestತಂತ್ರಜ್ಞಾನ / Technology

ಆ್ಯಪಲ್ ಕಂಪನಿಯ ಐಫೋನ್ 16 ಬಿಡುಗಡೆ, ವಿಶೇಷತೆಗಳೇನು..? ಬೆಲೆ ಎಷ್ಟು..?

ನ್ಯೂಯಾರ್ಕ್ : ಆ್ಯಪಲ್ ಕಂಪನಿಯ ಹೊಸ ಸೀರಿಸ್ ಐಫೋನ್ 16 ಬಿಡುಗಡೆ ಮಾಡಿದೆ. ನಿನ್ನೆ ನಡೆದ ಲಾಂಚ್ ಇವೆಂಟ್ ನಲ್ಲಿ ಐಫೋನ್ 16, ಏರ್ ಪಾಡ್ಸ್, ಆಪಲ್ ವಾಚ್ ನ ಹೊಸ ಸೀರೀಸ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆ.13 ಸಂಜೆ 5:30ರಿಂದ ಐಫೋನ್‌ ಪ್ರಿ ಆರ್ಡರ್‌ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಶುರುವಾಗಲಿದೆ.

ಐಫೋನ್ 16 ವಿಶೇಷತೆಗಳೇನು..?
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳು ಅತ್ಯಂತ ಶಕ್ತಿಯುತವಾದ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇವುಗಳ ಹಿಂಭಾಗದ ಬಣ್ಣವು ತುಂಬಾ ವಿಶೇಷವಾಗಿದೆ. ಈ ಫೋನ್ಗಳನ್ನು ಅಲ್ಟ್ರಾಮರೀನ್, ಟೀಲ್, ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಐಫೋನ್ 16 ಪ್ರೋ ಮತ್ತು iPhone 16 ಪ್ರೋ ಮ್ಯಾಕ್ಸ್ ಫೋನ್‌ಗಳಲ್ಲಿ A18 Pro ಚಿಪ್ ಅನ್ನು ಅಳವಡಿಸಲಾಗಿದೆ. ಇದು 6 ಕೋರ್ಗಳನ್ನು ಹೊಂದಿದ್ದು ಐಫೋನ್ 15 ಪ್ರೊ ಚಿಪ್‌ಗಿಂತ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ 128 GB, 256GB, 512GB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ಐಫೋನ್‌ 16 ಪ್ರೋ 128GB, 256GB, 512GB, 1TB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೆ ಐಫೋನ್‌ 16 ಪ್ರೋ ಮ್ಯಾಕ್ಸ್‌ 256GB, 512GB, 1TB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ.

ಐಫೋನ್ 16 ಅತ್ಯುತ್ತಮ 48MP ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮರಾ 48MP ಮತ್ತು 12MP ಫೋಟೋಗಳನ್ನು ಸಂಯೋಜಿಸುವ ಮೂಲಕ 24MP ಫೋಟೋವನ್ನು ರಚಿಸುತ್ತದೆ. ಐಫೋನ್ 16 ನಲ್ಲಿ ಲಭ್ಯವಿರುವ ಹೊಸ ವೈಶಿಷ್ಟ್ಯವೆಂದರೆ ಇದರಲ್ಲಿ ಕ್ಯಾಮೆರಾದ ಸೆಟ್ಟಿಂಗ್‌ಗಳನ್ನು ಸುಲಭವಾಗಿ ಬದಲಾಯಿಸಬಹುದು. Phone 16 ನೊಂದಿಗೆ ನೀವು 4K60 ವೀಡಿಯೊವನ್ನು ಶೂಟ್ ಮಾಡಬಹುದು, ಅದು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದರ ಅಲ್ಟ್ರಾ-ವೈಡ್ ಕ್ಯಾಮೆರಾ ಕೂಡ ತುಂಬಾ ಚೆನ್ನಾಗಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಐಫೋನ್‌ 16 ಬೆಲೆ ಎಷ್ಟು..? (128 ಜಿಬಿ ಸ್ಟೋರೇಜ್ )
ಐಫೋನ್‌ 16 – 79,900 ರೂ.
ಐಫೋನ್‌ 16 ಪ್ಲಸ್‌ – 89,900 ರೂ.
ಐಫೋನ್‌ 16 ಪ್ರೋ – 1,19,900 ರೂ.
ಐಫೋನ್‌ 16 ಪ್ರೋ ಮ್ಯಾಕ್ಸ್‌ -1,44,900 ರೂ. (256 ಜಿಬಿ ಸ್ಟೋರೇಜ್‌)
:

Share with Friends
author avatar
News Desk