BlogEntertainmentLatestಸ್ಯಾಂಡಲ್​ವುಡ್-Sandalwood

ಕೋಮಲ್ ಅಭಿನಯದ “ಕೋಣ” ಚಿತ್ರದ ಟೀಸರ್ ಲಾಂಚ್

ನಟ ಕೋಮಲ್ ಅಭಿನಯದ “ಕೋಣ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕೋಣ, ಕುಪ್ಪಂಡ ಪ್ರೊಡಕ್ಷನ್ ಚೊಚ್ಚಲ ಪ್ರಯತ್ನವಾಗಿದೆ. ಈ ಬ್ಯಾನರ್ ನಡಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ನಿರ್ಮಾಣ ಮಾಡಿದ್ದಾರೆ. ಕೋಣ ಟೀಸರ್ ಬಹಳ ಕುತೂಹಲ ಹೆಚ್ಚಿಸಿದ್ದು, ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ. ನೈಜ ಘಟನೆ ಆಧರಿಸಿಯೇ ನಿರ್ದೇಶಕ ಎಸ್ ಹರಿಕೃಷ್ಣ ಒಂದು ರೋಚಕ ಕಥೆ ಹೆಣೆದಿದ್ದಾರೆ.

ಕೋಣ ಸಿನಿಮಾದಲ್ಲಿ ಕೋಮಲ್ ಹೊಸ ರೀತಿಯ ಪಾತ್ರವನ್ನ ನಿರ್ವಹಿಸಲಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ನಟಿಸಿದ್ದಾರೆ. ಕೋಮಲ್ ಅಭಿನಯದ ಈ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಕೊಡುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಕಥಾಹಂದರ ಒಳಗೊಂಡಿದೆ .

Share with Friends
author avatar
News Desk