BlogEntertainmentLatestಸ್ಯಾಂಡಲ್​ವುಡ್-Sandalwood

ಅಣ್ಣ ತಂಗಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳ ನಿರ್ಮಾಪಕ ಪ್ರಭಾಕರ್ ನಿಧನ

ಬೆಂಗಳೂರು : ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ನಿರ್ದೇಶಕ ಪ್ರಭಾಕರ್ (64) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕನ್ನಡದಲ್ಲಿ ಅವಳೇ ನನ್ನ ಹೆಂಡ್ತಿ, ಅಣ್ಣ ತಂಗಿ ಸೇರಿದಂತೆ ಕೆಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದ ಇವರು ಸದಭಿರುಚಿ ನಿರ್ಮಾಪಕ ಎನಿಸಿಕೊಂಡಿದ್ದರು.

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿರ್ಮಾಪಕ ಕೆ. ಪ್ರಭಾಕರ್ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದಷ್ಟೇ ಅವರಿಗೆ ಹೃದಯಾಘಾತವಾಗಿತ್ತು. ಇಂದು ಮತ್ತೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅನೇಕ ಚಿತ್ರಗಳಿಗೆ ನಿರ್ಮಾಣ ಮಾಡಿದ ಅವರು, ಅವಳೇ ನನ್ನ ಹೆಂಡ್ತಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವು ದೊಡ್ಡ ಯಶಸ್ಸು ಕಂಡಿತು. ಈ ಗೆಲುವಿನ ನಂತರ ಅವನೇ ನನ್ನ ಗಂಡ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರವು ಅವರನ್ನು ಕೈ ಹಿಡಿಯಿತು. ಮುಂದೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಲು ಶಕ್ತಿ ತುಂಬಿತು.

ವಿಷ್ಣುವರ್ಧನ್ ಅಭಿನಯದ ತುಂಬಿದ ಮನೆ ಮತ್ತು ಎಲ್ಲರಂಥಲ್ಲ ನನ್ನ ಗಂಡ, ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ, ಶಶಿಕುಮಾರ್ ಅಭಿನಯದ ಮುದ್ದಿನ ಮಾವ, ಶಿವರಾಜ್ ಕುಮಾರ್ ಮತ್ತು ರಾಧಿಕಾ ಅಭಿನಯದ ಅಣ್ಣ ತಂಗಿ, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿನಯದ ಲವ ಕುಶ ಚಿತ್ರಗಳನ್ನು ನಿರ್ಮಿಸಿದರು.

ಬೆಂಗಳೂರಿನ ಎನ್‌. ಆರ್‌ ಕಾಲೋನಿಯಲ್ಲಿ ಕೆ. ಪ್ರಭಾಕರ್ ವಾಸವಿದ್ದರು. ಅವರ ನಿಧನಕ್ಕೆ ಆಪ್ತರು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವದಿಂದಲೇ ಕೆ. ಪ್ರಭಾಕರ್ ಚಿತ್ರರಂಗದಲ್ಲಿ ಹೆಸರಾಗಿದ್ದರು. ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ನಟನೆಯ ‘ಅಣ್ಣ-ತಂಗಿ’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೆ. ಪ್ರಭಾಕರ್ ಬಂಡವಾಳ ಹೂಡಿದ್ದರು.

ಲವ ಕುಶ ನಂತರ ನಿರ್ಮಾಣದಿಂದ ದೂರ ಉಳಿದರು. ಎರಡು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಪ್ರಭಾಕರ್ ಇಹಲೋಕ ತ್ಯಜಿಸಿದ್ದಾರೆ.

Share with Friends
author avatar
News Desk