BlogEntertainmentರಾಜ್ಯ-Karnataka

ದರ್ಶನ್ ಬಿಡುಗಡೆ ಮಾಡುವಂತೆ ಅಭಿಮಾನಿ ಹೈಡ್ರಾಮಾ

ಬೆಂಗಳೂರು : ದರ್ಶನ್ ಬಿಡುಗಡೆ ಮಾಡುವಂತೆ ಪರಪ್ಪನ ಅಗ್ರಹಾರ ಜೈಲಿನ ಬಳಿ ಅಭಿಮಾನಿಯೊಬ್ಬ ಹೈಡ್ರಾಮಾ ಮಾಡಿದ್ದಾನೆ. ಜೈಲು ಬಳಿ ಬಂದು ದರ್ಶನ್ ಬಿಡುಗಡೆ ಮಾಡುವಂತೆ ಉರುಳು ಸೇವೆ ಮಾಡಲು ಮುಂದಾದಾಗ ಅಡ್ಡಗಟ್ಟಿದ ಪೋಲೀಸರು ತಡೆದಿದ್ದಾರೆ.

https://youtu.be/aJm0fdS-sjo

ಕರುನಾಡು ಯುವಸೇನೆ ರಾಜ್ಯಾದ್ಯಕ್ಷ ಬಸವೇಶ್ವರ ನಗರ ವಾಸಿ ರವಿಕುಮಾರ್ ಹೈಡ್ರಾಮಾ ಮಾಡಿದ ಅಭಿಮಾನಿ. ತೆಂಗಿನ ಕಾಯಿ ಒಡೆಯಲು ಮುಂದಾದಾಗ ತೆಂಗಿನಕಾಯಿ ಹೊಡೆಯದಂತೆ ಅಡ್ಡಗಟ್ಟಿದ ಪೋಲೀಸರು ಅವನನ್ನು ಬಂದಿಸಿ ಠಾಣೆಗೆ ಕರೆದೊಯ್ದಿದ್ದಾರೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಅವರನ್ನು ಬಿಡುಗಡೆ ಮಾಡಿ ಅಂದು ರವಿಕುಮಾರ್ ಆಗ್ರಹಿಸಿದ್ದಾನೆ.

Share with Friends
author avatar
News Desk