BlogLatestಬೆಂಗಳೂರು-Bengaluru

ಬೆಂಗಳೂರಲ್ಲಿ ಮತ್ತೆ ಬಿಬಿಎಂಪಿ- ಪೌರಕಾರ್ಮಿಕರ ನಡುವೆ ಫೈಟ್..?

ಬೆಂಗಳೂರು : ಪೌರಕಾರ್ಮಿಕರ ಮಕ್ಕಳಿಗೆ ಗುತ್ತಿಗೆ ಕೊಟ್ಟಿದ್ದ ಸಾರ್ವಜನಿಕ ಶೌಚಾಲಯಕ್ಕೆ ರೀ ಟೆಂಡರ್ ಗೆ ಬಿಬಿಎಂಪಿ ಮುಂದಾಗಿದ್ದು. ಪೌರಕಾರ್ಮಿಕರ ಕೈಯಿಂದ ಕಸಿದು ಖಾಸಗಿ ಕಂಪೆನಿಗಳಿಗೆ ನಿರ್ವಹಣೆ ಗುತ್ತಿಗೆ ಕೊಡಲು ಮುಂದಾಗಿದೆ. ಇದರಿಂದ ಬೆಂಗಳೂರಲ್ಲಿ ಮತ್ತೆ ಬಿಬಿಎಂಪಿ ವರ್ಸಸ್ ಪೌರ ಕಾರ್ಮಿಕರ ನಡುವೆ ಫೈಟ್ ಶುರುವಾಗಲಿದೆ ಎನ್ನಲಾಗುತ್ತಿದೆ.

ಪೌರಕಾರ್ಮಿಕರು ಸರಿಯಾಗಿ ಶೌಚಾಲಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಲು ಬಿಬಿಎಂಪಿ ನಿರ್ಧರಿಸಿದ್ದು ಬಹುತೇಕ ಎಲ್ಲಾ ಸಾರ್ವಜನಿಕ ಶೌಚಾಲಯದ ನಿರ್ವಹಣೆಗೆ ನೂತನ ಟೆಂಡರ್ ಕರೆಯಲು ಪಾಲಿಕೆ ತೀರ್ಮಾನ ಮಾಡಿದೆ. ಈ ಮೂಲಕ ನೇಮಕಾತಿಗೆ ಕಾಯುತ್ತಿರವ ಪೌರಕಾರ್ಮಿಕರ ಕೆಂಗಣ್ಣಿಗೆ ಪಾಲಿಕೆ ಗುರಿಯಾಗಲಿದೆ.

ನಗರದಲ್ಲಿದೆ ಬರೋಬ್ಬರಿ 400ಕ್ಕೂ ಅಧಿಕ ಸಾರ್ವಜನಿಕ ಶೌಚಾಲಯ ಹಾಗೂ ಇ ಟಾಯ್ಲೆಟ್ ಗಳು ಇದ್ದು ಇದರಲ್ಲಿ ಬಹುತೇಕ ಶೌಚಾಲಯಗಳ ನಿರ್ವಹಣೆಯನ್ನು ಪೌರಕಾರ್ಮಿಕರ ಕುಟುಂಬದವರೇ ಮಾಡುತ್ತಿದ್ದಾರೆ.

ಅವರ ಬದುಕಿಗೆ ಅನುಕೂಲವಾಗುವಂತೆ ಅವರದ್ದೇ ಕುಟುಂಬದ ಒಬ್ಬರಿಗೆ ಗುತ್ತಿಗೆ ನೀಡೋ ಸಂಪ್ರದಾಯ ಪಾಲಿಕೆಯದ್ದು, ಆದರೆ ಇದೀಗ ಅದನ್ನು ಕ್ಯಾನ್ಸಲ್ ಮಾಡಿ ನೂತನ ಟೆಂಡರ್ ಕರೆಯಲು ಮುಂದಾಗಿದೆ.

ಜಾಹಿರಾತು ಪಾಲಿಸಿ ಜಾರಿಯಾದರೆ ಸಾರ್ವಜನಿಕ ಶೌಚಾಲಯದ ಮೇಲೆ ಜಾಹೀರಾತಿಗೆ ಅವಕಾಶ.. ಇದನ್ನು ಕೈತಪ್ಪಿಸೋಕೆ ಪಾಲಿಕೆ ಅಧಿಕಾರಿಗಳ ಪ್ಲ್ಯಾನ್ ಎನ್ನುತ್ತಿರುವ ಪೌರಕಾರ್ಮಿಕರು. ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡಿದರೆ ಪಾಲಿಕೆ ಅಧಿಕಾರಿಗಳ ಜೊತೆ ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳಬಹುದು ಎಂದು ಆರೋಪಿಸಿದ್ದಾರೆ .

Share with Friends
author avatar
News Desk