BlogLatestTop Storiesವಿದೇಶ-International

ಪೋಲೆಂಡ್‌ನಲ್ಲಿ ಮೋದಿ, ಇಲ್ಲಿದೆ ಪ್ರಧಾನಿ ಭೇಟಿಯ ಹೈಲೈಟ್ಸ್

ವಾರ್ಸಾ: 45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್‌ ಮತ್ತು ಉಕ್ರೇನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪೋಲೆಂಡ್‌ ರಾಜಧಾನಿ ವಾಸಾಕ್ಕೆ ಬಂದಿಳಿದಿರುವ ಮೋದಿ ಅವರು ಇಲ್ಲಿ ಎರಡು ದಿನಗಳು ವಾಸ್ತವ್ಯ ಹೂಡಲಿದ್ದಾರೆ. ಇದು 45 ವರ್ಷಗಳ ನಂತರ ಈ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಅಧಿಕೃತ ಭೇಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಪೋಲೆಂಡ್ ತಲುಪಿದ್ದಾರೆ. ಪೋಲೆಂಡ್‌ನ ಉಪ ಪ್ರಧಾನಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ವಾರ್ಸಾದ ಹೊಟೇಲ್‌ಗೆ ಪ್ರಧಾನಿ ಮೋದಿ ಆಗಮಿಸಿದ ತಕ್ಷಣ ಅಲ್ಲಿದ್ದ ನೂರಾರು ಭಾರತೀಯರು ಅವರನ್ನು ಸ್ವಾಗತಿಸಿದರು.

ಜಾಮ್ ಸಾಹಿಬ್ ಸ್ಮಾರಕಕ್ಕೆ ಪ್ರಧಾನಿ ನಮನ :
ಸಾವಿರಾರು ಅನಾಥ ಮಕ್ಕಳನ್ನು ಸಲಹಿದ್ದ ಜಾಮ್ ಸಾಹಿಬ್ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸಿದ್ದಾರೆ. ಪೋಲೆಂಡ್​ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಯಹೂದಿ ಮಕ್ಕಳ ಜೀವ ಉಳಿಸಿದ್ದ ಮಹಾರಾಜ ಜಾಮ್ ಸಾಹೇಬರನ್ನು ನೆನೆದಿದ್ದಾರೆ. ನವನಗರದ ಮಹಾರಾಜ ಜಾಮ್ ಸಾಹೇಬ್ ಪೋಲೆಂಡ್​ನಿಂದ ಭಾರತಕ್ಕೆ ಕರೆತರುವ ಮೂಲಕ ಅನೇಕ ಯಹೂದಿಗಳ ಜೀವವನ್ನು ಉಳಿಸಿದ್ದರು ಮಾತ್ರವಲ್ಲದೆ ಅವರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದರು. ಇದು ಗುಜರಾತ್‌ನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿರುವ ಸ್ಥಳವಾಗಿದೆ. ಪೋಲೆಂಡ್‌ನ 1000 ಅನಾಥ ಮಕ್ಕಳನ್ನು ಪೋಷಕರಾಗಿ ಬೆಳೆಸಿದ ಭಾರತೀಯ ಮಹಾರಾಜರ ಹೆಸರನ್ನು ಈ ಸ್ಮಾರಕಕ್ಕೆ ಇಡಲಾಗಿದೆ.

ಯುದ್ಧಭೂಮಿಯಲ್ಲಿ ಸಮಸ್ಯೆಗೆ ಪರಿಹಾರವಿಲ್ಲ;

ಪೋಲೆಂಡ್​ನ ವಾರ್ಸಾದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಪೋಲಿಷ್ ಪ್ರಧಾನಿ ಡೊನಾಲ್ಡ್ ಟ್ರಷ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಪೋಲೆಂಡ್ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸಿರುವುದಾಗಿ ಘೋಷಿಸಿದರು. ಪೋಲಿಷ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ, ಪ್ರಧಾನಿ ಮೋದಿ ಅವರು ಇದೀಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. “ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಘರ್ಷಣೆಗಳು ನಮ್ಮೆಲ್ಲರಿಗೂ ಬಹಳ ಕಾಳಜಿಯ ವಿಷಯವಾಗಿದೆ” ಎಂದು ಅವರು ಹೇಳಿದರು. “ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತವು ದೃಢವಾಗಿ ನಂಬುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ :
ಪೋಲೆಂಡ್‌ ಪ್ರವಾಸದ ನಂತರ ಮೋದಿ ಅವರು ಇದೇ 23ರಂದು ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ಕೊಡಲಿದ್ದಾರೆ. ಅಂದು ಸುಮಾರು ಏಳು ತಾಸು ಅವರು ಕೀವ್‌ನಲ್ಲಿ ಇರಲಿದ್ದಾರೆ. ಪೋಲೆಂಡ್‌ನಿಂದ ಕೀವ್‌ಗೆ ‘ರೈಲ್ ಫೋರ್ಸ್ ಒನ್’ ರೈಲಿನಲ್ಲಿ ಮೋದಿ ಅವರು ಹೋಗಿ ಬರಲಿದ್ದಾರೆ. ಎರಡೂ ಕಡೆಯ ಪ್ರಯಾಣ ಅವಧಿ ಒಟ್ಟು 20 ತಾಸು ಆಗಲಿದೆ. ಅದಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ. 1991ರಲ್ಲಿ ಉಕ್ರೇನ್‌ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.

Share with Friends
author avatar
News Desk