Latestರಾಜಕೀಯ | Politicsರಾಜ್ಯ-Karnataka

ದೆಹಲಿ ಅಂಗಳದಲ್ಲಿ ಸಂಪುಟ ವಿಸ್ತರಣೆ ಸರ್ಕಸ್: ‘3 ಡಿಸಿಎಂ’ ಪ್ರಸ್ತಾಪದೊಂದಿಗೆ ಡಿಕೆಶಿ ಮಾಸ್ಟರ್‌ಸ್ಟ್ರೋಕ್!

ದೆಹಲಿ : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ಏರುತ್ತಿದ್ದಂತೆಯೇ ದೆಹಲಿ ಅಂಗಳದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಗ್ ಮಾಸ್ಟರ್ ಪ್ಲಾನ್ ಒಂದನ್ನು ಇಟ್ಟಿದ್ದಾರೆ. ಸಂಪುಟ ವಿಸ್ತರಣೆಯ ಹೊಸ್ತಿಲಲ್ಲಿ ‘3 ನೂತನ ಡಿಸಿಎಂ’ ಹುದ್ದೆಗಳ ಹೊಸ ಪ್ರಪೋಸಲ್ ತರುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹಾಗೂ ಕೈ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.

ಹೈಕಮಾಂಡ್ ಅಂಗಳದಲ್ಲಿ ಭಾರಿ ರಾಜಕೀಯ ದಾಳ ಉರುಳಿಸಿರುವ ಡಿಕೆಶಿ, ಒಂದೇ ಏಟಿಗೆ ಪಕ್ಷದೊಳಗಿನ ಭಿನ್ನಮತ ಶಮನ ಹಾಗೂ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ಸರಿದೂಗಿಸಲು ಮುಂದಾಗಿದ್ದಾರೆ.
​3 ನೂತನ ಡಿಸಿಎಂ ಹುದ್ದೆ ಸೃಷ್ಟಿ ಪ್ರಪೋಸಲ್: ರಾಜ್ಯದಲ್ಲಿ ಜಾತಿ ಆಧಾರಿತ ಸಮತೋಲನ ಕಾಯ್ದುಕೊಳ್ಳಲು ಲಿಂಗಾಯತ ಹಾಗೂ ಎಸ್‌ಸಿ/ಎಸ್‌ಟಿ, ಓಬಿಸಿ (OBC) ಸಮುದಾಯದ ನಾಯಕರಿಗೆ ಹೆಚ್ಚುವರಿಯಾಗಿ ಮೂರು ಡಿಸಿಎಂ (DCM) ಸ್ಥಾನ ನೀಡಬೇಕೆಂಬ ಪ್ರಸ್ತಾಪವನ್ನು ಹೈಕಮಾಂಡ್ ಮುಂದಿಡಲಾಗಿದೆ.

ನಾಯಕತ್ವದ ಸಂಘರ್ಷಕ್ಕೆ ತಡೆ: ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದರಿಂದ ಪಕ್ಷದಲ್ಲಿ ಬೆಳೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ನಡುವಿನ ನಾಯಕತ್ವದ ಸಂಘರ್ಷ ಮತ್ತು ಭಿನ್ನಮತಕ್ಕೆ ತಡೆ ಬೀಳಲಿದೆ ಎಂಬುದು ಡಿಕೆಶಿ ಅವರ ಮಾಸ್ಟರ್ ಪ್ಲಾನ್.
​ಸಿದ್ದು ಬೆಂಬಲಿಗರಿಗೆ ಗಾಳ: ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಕೆ.ಎನ್. ರಾಜಣ್ಣ ಹಾಗೂ ಜಮೀರ್ ಅಹ್ಮದ್ ಖಾನ್ ವಿಷಯದಲ್ಲಿ ಡಿಕೆಶಿ ಸಕಾರಾತ್ಮಕ ಧೋರಣೆ ತಳೆದಿದ್ದು, ಹೈಕಮಾಂಡ್ ಮಟ್ಟದಲ್ಲಿ ಇವರ ಪರ ಬ್ಯಾಟಿಂಗ್ ಮಾಡುವ ಮೂಲಕ ಸಿದ್ದು ಬೆಂಬಲಿಗರನ್ನು ತಮ್ಮತ್ತ ಸೆಳೆಯುವ ತಂತ್ರ ಹೆಣೆದಿದ್ದಾರೆ.

Share with Friends
author avatar
Digital Desk