BlogLatestರಾಜ್ಯ-Karnataka

ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿಯಿಂದ ಟೂರ್ ಪ್ಯಾಕೇಜ್

ಬೆಂಗಳೂರು : ಕರ್ನಾಟಕ ರಸ್ತೆ ಸಾರಿಗೆ ನಿಗಮವು ಜನರಿಗೆ ಅನುಕೂಲ ಆಗುವಂತೆ ಈಗ ಜೋಗ್ ಫಾಲ್ಸ್ ಗೆ ಟೂರ್ ಪ್ಯಾಕೇಜ್ ನೀಡುತ್ತಿದೆ. ಜನರಿಗೆ ಉತ್ತಮ ಸೇವೆ ಒದಗಿಸಲು ಸದಾ ಮುಂದೆ ಇರುವ ಕೆಎಸ್ಆರ್ಟಿಸಿ ಉಚಿತ ಊಟದ ವ್ಯವಸ್ಥೆಯೊಂದಿಗೆ ಈ ಟೂರ್ ಘೋಷಣೆ ಮಾಡಲಾಗಿದೆ.

ಇದೆ ಬರುವ ಶುಕ್ರವಾರ (ಜುಲೈ 19) ಮತ್ತು ಶನಿವಾರ (ಜುಲೈ 20) ಎರಡು ಬೆಂಗಳೂರಿಂದ ಜೋಗಕ್ಕೆ ಬಸ್ ಇರಲಿದೆ. ವಿಶೇಷ ಪ್ರಯಾಣಕ್ಕೆ ಒಬ್ಬರಿಗೆ 3000 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಅಂತೆಯೇ 6ರಿಂದ 12 ವರ್ಷದ ಒಳಗಿನ ಮಕ್ಕಳಿಗೆ ರೂ.2800 ರೂಪಾಯಿ ಪ್ರಯಾಣದ ದರ ನಿಗದಿ ಮಾಡಲಾಗಿದೆ.

ಬೆಂಗಳೂರು ಮೆಜೆಸ್ಟಿಕ್ ನಿಂದಾ ರಾತ್ರಿ 10.30 ಗಂಟೆಗೆ ಬಸ್ ಹೊರಡಲಿದೆ. ಬೆಳಗ್ಗೆ 05.30ಕ್ಕೆ ಸಾಗರಕ್ಕೆ ತಲುಪುತ್ತದೆ. ಅದರ ಬಳಿಕ ನಿಮಗೆ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲು ಬೆಳಗ್ಗೆ 07 ಗಂಟೆವರೆಗೆ ಸಮಯ ಇರುತ್ತದೆ. ನಂತರ ಅಲ್ಲಿ ತಿಂಡಿ ತಿಂದು ವರದಹಳ್ಳಿಗೆ ತಲುಪಿ ನಂತರ ದೇವರ ದರ್ಶನ ಪಡೆದು ನಂತರ ಅಲ್ಲಿನ ಸುತ್ತಮುತ್ತಲೂ ಇರುವ ವರದಮೂಲದಿಂದ ಇಕ್ಕೇರಿ, ಇಕ್ಕೇಯಿಂದ ಕೆಳದಿ, ಎಲ್ಲಾ ಕಡೆಗಳಿಗೆ ಭೇಟಿ ಮಾಡಿ ಬಳಿಕ ಸಾಗರಕ್ಕೆ ಬಂದು ಅಲ್ಲಿ ಊಟದ ವ್ಯವಸ್ಥೆ ಇರುತ್ತದೆ.

ನಂತರ ಜೋಗ ಜಲಪಾತಕ್ಕೆ ಹೋಗಿ ಒಂದು ಮೂರು ನಾಲ್ಕು ಗಂಟೆಗಳ ಕಾಲ ಅಲ್ಲಿ ಜೋಗ ಜಲಪಾತ ವೀಕ್ಷಣೆ ಮಾಡಿ ಸಾಗರಕ್ಕೆ ಬಂದು ಶಾಪಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಬಳಿಕ ಸಾಗರದಲ್ಲಿ ಊಟ ಮಾಡಿ ರಾತ್ರಿ 22.00 ಗಂಟೆಗೆ ಸಾಗರದಿಂದ ಹೋರಾಟ ಬಸ್ ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ.

Share with Friends
author avatar
News Desk