BlogEntertainmentಸ್ಯಾಂಡಲ್​ವುಡ್-Sandalwood

ಸ್ಯಾಂಡಲ್ವುಡ್ ಸಂಕಷ್ಟಗಳ ಪರಿಹಾರಕ್ಕೆ ಹೋಮ-ಹವನ

ಬೆಂಗಳೂರು: ಕೋವಿಡ್ ಬಳಿಕ ಕನ್ನಡ ಚಿತ್ರರಂಗಕ್ಕೆ ಎದುರಾಗಿರುವ ಸಂಕಷ್ಟ, ನಟರ ಅಗಲಿಕೆ, ಚಿತ್ರರಂಗಕ್ಕೆ ಎದುರಾಗಿರುವ ಸಂಕಷ್ಟಗಳ ನಿವಾರಣೆ ಹಾಗೂ ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಕಲಾವಿದರ ಸಂಘದಿಂದ ಹಿರಿಯ ನಟ ದೊಡ್ಡಣ್ಣ ದಂಪತಿ ನೇತೃತ್ವದಲ್ಲಿ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಮ್ಮುಖದಲ್ಲಿ ವಿಶೇಷ ಹೋಮ-ಹವನ ನಡೆಸಲಾಗಿದೆ. ವಿಶೇಷ ಪೂಜೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ-ನಟಿಯರು, ಕಲಾವಿದರು ಪಾಲ್ಗೊಂಡಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಗಣಪತಿ ಹೋಮ, ಸರ್ಪಶಾಂತಿ, ಮೃತ್ಯುಂಜಯ ಹೋಮ ಸೇರಿದಂತೆ ಹಲವು ರೀತಿಯ ಹೋಮ-ಹವನ, ವಿಶೇಷ ಪೂಜೆಗಳನ್ನು 8 ಜನರ ಪುರೋಹಿತರ ನೇತೃತ್ವದಲ್ಲಿ ನೆರವೇರಿಸಲಾಗಿದೆ.

ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಾವಾಸಂತಿ, ಪದ್ಮಜಾ ರಾವ್, ಶಾಂತಲಾ, ವಾಣಿಶ್ರೀ, ನಟರಾದ ಪ್ರೇಮ್, ಅಭಿಷೇಕ್ ಅಂಬರೀಶ್ ಸೇರಿದಂತೆ ಬಹುತೇಕ ಕಲಾವಿದರು ಪಾಲ್ಗೊಂಡಿದ್ದಾರೆ.

ಪೂಜೆ, ಹೋಮ ಹವನದ ಉಸ್ತುವಾರಿಯನ್ನು ಜ್ಯೋತಿಷಿ- ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ಅವರು ವಹಿಸಿಕೊಂಡಿದ್ದಾರೆ. ಕೇಳೇ ಡೈಗಳ ಹಿಂದಷ್ಟೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಚಿತ್ರರಂಗದ ಹಿರಿಯರು ಕೋವಿಡ್‍ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳಾದವು. ಕಾರಣಾಂತರಗಳಿಂದ ಆಗಲಿಲ್ಲ. ದೊಡ್ಡಣ್ಣ ಅವರು ಒಂದು ತಿಂಗಳ ಮುಂಚೆ ಯಾಕೆ ಒಂದು ಪೂಜೆ ಮಾಡಿಸಬಾರದು ಎಂದು ಹೇಳಿದರು. 14ರಂದು ದಿನ ಚೆನ್ನಾಗಿರುವುದರಿಂದ ಅಂದು ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ. ಇದಕ್ಕೆ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇವೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದರು.

Share with Friends
author avatar
News Desk