BlogLatestTop Stories

ಬೆಂಗಳೂರು-ಮಂಗಳೂರು ರೈಲು ವ್ಯತ್ಯಯ, ಪರೀಕ್ಷೆ ಮಿಸ್, ವಿದ್ಯಾರ್ಥಿ ಬೇಸರ

ಬೆಂಗಳೂರು : ಮಂಗಳೂರು ರೈಲು ಮಾರ್ಗದಲ್ಲಿ ಭೂ ಕುಸಿತ ಹಿನ್ನೆಲೆ ರೈಲು ವ್ಯತ್ಯಯದಿಂದ ವಿದ್ಯಾರ್ಥಿಯ ಪರೀಕ್ಷೆ ತಪ್ಪಿದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬೇಸರ ಹೊರ ಹಾಕಿದ ವಿದ್ಯಾರ್ಥಿ, ಮಂಗಳೂರಿಗೆ ಏರ್ ಫೋರ್ಸ್ ಪರೀಕ್ಷೆಗಾಗಿ ತೆರಳುತ್ತಿದ್ದ ರೋಹಿತ್ ಸಿಂಗ್ ರಾವತ್ ಪೋಸ್ಟ್ ಮಾಡಿ ಬೇಸರ ಹೊರ ಹಾಕಿದ್ದಾರೆ.

ರಾಜಸ್ತಾನದಿಂದ ಬಂದು ಬೆಂಗಳೂರಿನಿಂದ ಮಂಗಳೂರಿಗೆ ಟ್ರೈನ್ ನಲ್ಲಿ ಹೋಗುತ್ತಿದ್ದ ರಾವತ್, ಇಂದು ಬೆಳಗ್ಗೆ ೮ ಗಂಟೆಗೆ ಮಂಗಳೂರಿನ ಅಬ್ಬಕ್ಕ ಸರ್ಕಲ್ ಬಳಿಕ ಖಾಸಗಿ ಕಾಲೇಜಿನಲ್ಲಿದ್ದ ಪರೀಕ್ಷೆ ಭೂಕುಸಿತದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ ಆಗಿದೆ.

ಮಾರ್ಗದಲ್ಲಿ ಸಿಲುಕಿ ಪ್ರಯಾಣಿಕರ ಪರದಾಟ ನಡೆಸಿದ್ದು ಸುಮಾರು ೪ ಗಂಟೆಗಳ ಕಾಲ ಸಂಚಾರ ವ್ಯತ್ಯಯ ಆಗಿದೆ. ಇದರಿಂದ ಪರೀಕ್ಷೆ ಸಮಯಕ್ಕೆ ಹಾಜರಾಗಲಾಗದೇ ಅಭ್ಯರ್ಥಿ ಪರದಾಟ ಅನುಭವಿಸಿದ್ಧಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಬೇಸರ ಹೊರ ಹಾಕಿದ್ದು ಬೆಂಗಳೂರು ಮಂಗಳೂರು ನಡುವುನ ರೈಲು 4ಗಂಟೆಗಳ ಕಾಲ ತಡವಾಗಿ ಚಲಿಸುತ್ತದೆ.ಈ ಕಾರಣದಿಂದಾಗಿ ನನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ನನಗೆ ಸಾಧ್ಯವಾಗುವುದಿಲ್ಲ. ಇದರ ಹೊಣೆ ಹೊರುವವರು ಯಾರು ಎಂದು ಪೋಸ್ಟ್ ಹಾಕಿ ಅಭ್ಯರ್ಥಿ ಬೇಸರ ವ್ಯಕ್ತ ಪಡಿಸಿದ್ದಾರೆ.

Share with Friends
author avatar
News Desk