BlogLatestTop Storiesರಾಜ್ಯ-Karnataka

ಕಳಪೆ ಮಾಂಸ ದಂಧೆ : ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ನೋಟೀಸ್

ಬೆಂಗಳೂರು : ಬೆಂಗಳೂರಿನಲ್ಲಿ ಕಳಪೆ ಮಾಂಸ ದಂಧೆ ಆರೋಪ ಪ್ರಕರಣದಲ್ಲಿ ನಗರದ ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಆಹಾರ ಇಲಾಖೆಯ ಅಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ.

ಮೊದಲ ಹಂತವಾಗಿ ಅಬ್ದುಲ್ ರಜಾಕ್ ರಿಂದ ಮಾಂಸ ಪಡೀತಿದ್ದ 9 ಮಂದಿ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು. ಈ ಸಂಬಂಧ ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸೂಚಿಸಲಾಗಿದೆ.ರೆಸ್ಟೋರೆಂಟ್, ಹೋಟೆಲ್ ಮಾಲೀಕರು ನಾಳೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಸೋಮವಾರವೂ ಅಬ್ದುಲ್ ರಜಾಕ್ ವಿಚಾರಣೆ ನಡೆಸಲಿದೆ. ನಿನ್ನೆ‌ ವಿಚಾರಣೆಗೆ ಹಾಜರಾಗಿದ್ದ ಅಬ್ದುಲ್ ರಜಾಕ್ ಐದಾರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ ಸೋಮವಾರ ಕೂಡ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ.

Share with Friends
author avatar
News Desk